ದಾವೂದ್ ಪುತ್ರನ ಬಳಿಕ ಮತ್ತೋರ್ವ ಪಾತಕಿ ಪುತ್ರನೂ ಆಧ್ಯಾತ್ಮಕ್ಕೆ

Published : Aug 27, 2018, 01:01 PM ISTUpdated : Sep 09, 2018, 10:16 PM IST
ದಾವೂದ್ ಪುತ್ರನ ಬಳಿಕ ಮತ್ತೋರ್ವ ಪಾತಕಿ ಪುತ್ರನೂ ಆಧ್ಯಾತ್ಮಕ್ಕೆ

ಸಾರಾಂಶ

ದಾವೂದ್ ಪುತ್ರನ ಬಳಿಕ ಇದೀಗ ಇನ್ನೋರ್ವ ಭೂಗತ ಪಾತಕಿ ಪುತ್ರನೂ ಕೂಡ ಆಧ್ಯಾತ್ಮದ ಹಾದಿ ಹಿಡಿದಿದ್ದಾನೆ. ಛೋಟಾ ಶಕೀಲ್‌ನ ಏಕಮಾತ್ರ ಪುತ್ರ ಮುದಾಶೀರ್ ಶೇಖ್ ‘ಹಫೀಜ್ ಎ ಕುರಾನ್’ ಆಗಿದ್ದಾನೆ.

ಮುಂಬೈ: 1993ರ ಮುಂಬೈ ಸ್ಫೋಟ ಪ್ರಕರಣದ ರೂವಾರಿ, ದಾವೂದ್ ಇಬ್ರಾಹಿಂ ಪುತ್ರ ಪಾಕಿಸ್ತಾನದಲ್ಲಿ ಮೌಲಾನಾ ( ಧಾರ್ಮಿಕ ಪ್ರವಚಕ)  ಆದ ಬೆನ್ನಲ್ಲೇ, ದಾವೂದ್‌ನ ಬಂಟ ಛೋಟಾ ಶಕೀಲ್‌ನ ಏಕೈಕ ಪುತ್ರನೂ ಅಧ್ಯಾತ್ಮದ ಹಾದಿ ಹಿಡಿದಿದ್ದಾನೆ. ಛೋಟಾ ಶಕೀಲ್‌ನ ಏಕಮಾತ್ರ ಪುತ್ರ ಮುದಾಶೀರ್ ಶೇಖ್ ‘ಹಫೀಜ್ ಎ ಕುರಾನ್’ ಆಗಿದ್ದಾನೆ. ಕುರಾನ್‌ನಲ್ಲಿ 6236 ಶ್ಲೋಕಗಳಿದ್ದು, ಅದೆಲ್ಲವನ್ನೂ ಅಭ್ಯಾಸ ಮಾಡಿ ನೆನಪಿನಲ್ಲಿಟ್ಟು ಕೊಂಡವರನ್ನು ಹಫೀಜ್ ಎ ಕುರಾನ್ ಎಂದು ಕರೆಯಲಾಗುತ್ತದೆ.

ಛೋಟಾ ಶಕೀಲ್ ಜತೆಗೇ ನೆಲೆಸಿರುವ ಮುದಾಶೀರ್, ಕರಾಚಿ ಸುತ್ತಮುತ್ತಲ ಪ್ರದೇಶಗಳಲ್ಲಿ ಜನರಿಗೆ ಕುರಾನ್ ಬೋಧನೆ ಮಾಡುತ್ತಿದ್ದಾನೆ. ‘ಮುದಾಶೀರ್’ ಎಂದರೆ ಒಳ್ಳೆಯದರ ಮುನ್ಸೂಚನೆ. ಆದರೆ ಶಕೀಲ್ ಪಾಲಿಗೆ ಮಗನ ಅಧ್ಯಾತ್ಮ ಪ್ರೇಮ ಚಿಂತೆಯಾಗಿ ಕಾಡುತ್ತಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಕಳ್ಳ ವ್ಯವಹಾರ ನಡೆಸಿ ಸಂಪಾದಿಸಿರುವ ಆಸ್ತಿಗೆ ವಾರಸುದಾರನಾಗಿರುವ ಶಕೀಲ್‌ಗೆ ತನ್ನ ಏಕಮಾತ್ರ ಪುತ್ರ ಅಧ್ಯಾತ್ಮದ  ಹಾದಿ ಹಿಡಿದಿರುವುದರಿಂದ ಬೇಸರವಾಗಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!