ಮುಖ್ಯಮಂತ್ರಿಯಿಂದ ಬಹುಮಾನ ಪಡೆದಿದ್ದಕ್ಕೆ ದಂಡ ಕಟ್ಟುವ ಸ್ಥಿತಿ

First Published Jun 10, 2018, 2:35 PM IST
Highlights

ಸಾಮಾನ್ಯ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್‌ ಆಗುವುದೇ ಒಂದು ಖುಷಿ. ಅಂತಾದ್ದರಲ್ಲಿ ರಾಜ್ಯಕ್ಕೇ ಟಾಪರ್‌ ಆಗಿ, ಮುಖ್ಯಮಂತ್ರಿಯಿಂದಲೇ ಬಹುಮಾನ ಪಡೆದರೆ ಇನ್ನೆಷ್ಟುಖುಷಿಯಾಗಬೇಡ? ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಟಾಪರ್‌ ಎನಿಸಿ, ಮುಖ್ಯಮಂತ್ರಿಯಿಂದ ಬಹುಮಾನ ಪಡೆದ ತಪ್ಪಿಗೆ ಈಗ ದಂಡ ಕಟ್ಟಬೇಕಾಗಿ ಬಂದಿದೆ.

ಲಖನೌ: ಸಾಮಾನ್ಯ ವಿದ್ಯಾರ್ಥಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಪಾಸ್‌ ಆಗುವುದೇ ಒಂದು ಖುಷಿ. ಅಂತಾದ್ದರಲ್ಲಿ ರಾಜ್ಯಕ್ಕೇ ಟಾಪರ್‌ ಆಗಿ, ಮುಖ್ಯಮಂತ್ರಿಯಿಂದಲೇ ಬಹುಮಾನ ಪಡೆದರೆ ಇನ್ನೆಷ್ಟುಖುಷಿಯಾಗಬೇಡ? ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಟಾಪರ್‌ ಎನಿಸಿ, ಮುಖ್ಯಮಂತ್ರಿಯಿಂದ ಬಹುಮಾನ ಪಡೆದ ತಪ್ಪಿಗೆ ಈಗ ದಂಡ ಕಟ್ಟಬೇಕಾಗಿ ಬಂದಿದೆ.

ಹೌದು, ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆಯಲ್ಲಿ ಬಾರಾಬಂಕಿ ಜಿಲ್ಲೆಯ ಅಲೋಕ್‌ ಮಿಶ್ರಾ ರಾಜ್ಯಕ್ಕೇ ಏಳನೇ ರಾರ‍ಯಂಕ್‌ ಪಡೆದಿದ್ದ. ಅದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ ಅವರಿಗೆ 1 ಲಕ್ಷ ರು. ಬಹುಮಾನದ ಚೆಕ್‌ ನೀಡಿದ್ದರು.

ಆದರೆ, ಈ ಚೆಕ್‌ ಬ್ಯಾಂಕ್‌ನಲ್ಲಿ ನಗದೀಕರಣವಾಗದೆ, ಚೆಕ್‌ ಬೌನ್ಸ್‌ ಆಗಿದೆ. ಈ ರೀತಿ ಚೆಕ್‌ ಬೌನ್ಸ್‌ ಆಗಿರುವುದರಿಂದ, ವಿದ್ಯಾರ್ಥಿಯೂ ದಂಡ ಕಟ್ಟಿದ್ದಾನೆ. ಸಹಿ ಹೊಂದಾಣಿಕೆಯಾಗದ ಕಾರಣ ಚೆಕ್‌ ಬೌನ್ಸ್‌ ಆಗಿದೆ. ವಿಷಯ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿಗೆ ಹೊಸ ಚೆಕ್‌ ನೀಡಲಾಗಿದೆ.

click me!