
ಭಾರತದಲ್ಲಿ ವರದಿಯಾಗುವ ಬಹುತೇಕ ಬ್ಯುಸಿನೆಸ್ ಸರ್ಕಸ್ ಸ್ಟೋರಿಗಳು ದೊಡ್ಡ ದೊಡ್ಡ ನಗರಗಳನ್ನೇ ಕೇಂದ್ರೀಕರಿಸುತ್ತವೆ. ಆದರೆ ನಾವು ಇಂದು ನಿಮಗೆ ಹೇಳುತ್ತಿರುವ ಈ ಸ್ಟೋರಿ ಸಣ್ಣ ಪಟ್ಟಣದಿಂದ ಆರಂಭವಾಗಿ ಇಂದು ಭಾರತದ ಮೂಲೆ ಮೂಲೆಯನ್ನು ತಲುಪಿದೆ.
ಹೌದು, ಸಣ್ಣ ಪಟ್ಟಣಗಳು ಹಾಗೂ ಸಾಮಾನ್ಯ ಹಿನ್ನೆಲೆ ಹೊಂದಿರುವ ಮಹಿಳೆಯರು ಉದ್ಯೋಗಳನ್ನು ಸೃಷ್ಟಿಸುವ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಬ್ರೇಕ್ ಹಾಕುವ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇಂತಹದ್ದೇ ಸಾಧನೆಯೊಂದನ್ನು ಮಾಡಿರುವ ಈ ಮಹಿಳೆ ಯಾವುದೇ ಸದ್ದು ಸಲ್ಲಿದೆ, ಭಾರತದ ಮೂಲೆ ಮೂಲೆಯಲ್ಲೂ ಬ್ಯುಸಿನೆಸ್ ಮಾಡಿ ಯಶಸ್ಸು ಕಂಡಿದ್ದಾರೆ.
ತಮಿಳುನಾಡಿನ ಚೆನ್ನೈ ಮೂಲದ ತಾಮರೈ ಸೆಲ್ವಿ ಕೋವಿಡ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದೇ ವೇಳೆ ಆನ್‌ಲೈನ್‌ನಲ್ಲಿ ವೀಕ್ಷಿಸಿದ ವೀಡಿಯೊಗಳಿಂದ ಪ್ರೇರಿತರಾದ ಇವರು ಆನ್‌ಲೈನ್‌ನಲ್ಲಿ ಅಲಂಕಾರಿ ಉತ್ಪನ್ನಗಳ ಮಾರಾಟವನ್ನು ಶುರು ಮಾಡುತ್ತಾರೆ. ಕೇವಲ 8 ಸಾವಿರ ಬಂಡವಾಳದೊಂದಿಗೆ ಆರಂಭವಾದ ಇವರ ಬ್ಯುಸಿನೆಸ್, ಮೊದಲ ತಿಂಗಳು ಕೇವಲ 1500 ಆದಾಯವನ್ನು ನೀಡಿತ್ತು. ಆದರೆ ನಿರಾಸೆಗೊಳ್ಳದೆ ತಮ್ಮ ಪ್ರಯತ್ನವನ್ನು ಮುಂದುವರಿಸಿದ ಸೆಲ್ವಿ ಇಂದು ವಾರ್ಷಿಕ 56 ಲಕ್ಷ ರೂಪಾಯಿ ಮೌಲ್ಯದ ಆದಾಯ ಮಾಡುವ ಉದ್ಯಮವನ್ನು ನಿರ್ಮಿಸಿದ್ದಾರೆ.
ಮಣ್ಣಿನ ದೀಪ, ಐಸ್‌ಕ್ರೀಮ್ ಕಡ್ಡಿಗಳು, ಬಾಳೆಯಿಂದ ಮಾಡಿರುವ ಅಲಂಕಾರಿಕ ಉತ್ಪನ್ನಗಳನ್ನು ಅಮೆಜಾನ್ ಮತ್ತು ಇಂಡಿಯಾ ಮಾರ್ಟ್ ನಂತರ ಆನ್‌ಲೈನ್ ವೇದಿಕೆಗಳ ಮೂಲಕ ಮಾರಾಟ ಆರಂಭಿಸಿದ ಸೆಲ್ವಿ ಅವರು ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಒಂದು ಸಮಯದಲ್ಲಿ ಇವರು ನೀಡಿದ್ದ ಶೇಕಡಾ 30ರಷ್ಟು ವಸ್ತುಗಳು ಹಲವು ಕಾರಣಗಳಿಂದ ರಿಟರ್ನ್ ಆಗುತಿತ್ತಂತೆ. ಈ ವೇಳೆ ತಮ್ಮ ಪ್ಯಾಕೇಜ್ ಸೇರಿದಂತೆ ಬ್ಯುಸಿನೆಸ್‌ನಲ್ಲಿದ್ದ ಲೋಪಗಳಿಗೆ ಪರಿಹಾರ ಹುಡುಕಾಟ ಮಾಡುತ್ತಾ ನಷ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ.
ವಿಶೇಷ ಎಂದರೇ, ತಮ್ಮ ಬ್ಯುಸಿನೆಸ್ ಪ್ರಚಾರಕ್ಕೆ ಇವರು ಬಳಕೆ ಮಾಡಿಕೊಂಡಿದ್ದು, ಫೇಸ್ಬುಕ್, ಇನ್‌ಸ್ಟಾ ದಂತಹ ಸಾಮಾಜಿಕ ಜಾಲತಾಣಗಳನ್ನು. ಸದ್ಯ ಸೆಲ್ವಿ ನಿತ್ಯ ಸುಮಾರು 100 ಆರ್ಡರ್ ಗಳನ್ನು ಪಡೆದುಕೊಳ್ಳುತ್ತಿದ್ದು, ಇದಕ್ಕಾಗಿ ದೊಡ್ಡ ದಾಸ್ತಾನು ಹಾಗೂ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ಇದಕ್ಕಾಗಿ 2024ರಲ್ಲಿ ಬ್ಯಾಂಕ್ ಸಾಲವನ್ನು ಪಡೆದುಕೊಂಡಿದ್ದಾರೆ. ತಮ್ಮ ಬ್ಯುಸಿನೆಸ್ ಅವಧಿಯಲ್ಲಿ ಸೆಲ್ವಿ ಅವರು ಹಲವು ತರಬೇತಿಗಳನ್ನು ಪಡೆದುಕೊಂಡಿದ್ದು, ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಈ ಕುರಿತಂತೆ ಇಂಡಿಯಾ ಟುಡೇ ವರದಿಯನ್ನು ಪ್ರಕಟಿಸಿದ್ದು, ಸೆಲ್ವಿ ಅವರ ಸಾಧನೆಯನ್ನು ಗುರುತಿಸಿರುವ ಹಲವು ಸಂಸ್ಥೆಗಳು ಅವರನ್ನು ಗೌರವಿಸಿ ಮೆಚ್ಚುಗೆ ಸೂಚಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.