ಸಹಜ ಸ್ಥಿತಿಗೆ ತಮಿಳುನಾಡು

Published : Dec 14, 2016, 05:34 PM ISTUpdated : Apr 11, 2018, 01:08 PM IST
ಸಹಜ ಸ್ಥಿತಿಗೆ ತಮಿಳುನಾಡು

ಸಾರಾಂಶ

ಚೆನ್ನೈ, ಕಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲಿ ವ್ಯತ್ಯಯವಾಗಿರುವ ಮೊಬೈಲ್, ದೂರವಾಣಿ ಸೇವೆಯನ್ನು ಪುನಾರಂಭಿಸಲಾಗುತ್ತಿದೆ.

ಚೆನ್ನೈ/ನವದೆಹಲಿ(ಡಿ.14): ವಾರ್ದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿರುವ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಚೆನ್ನೈ, ಕಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲಿ ವ್ಯತ್ಯಯವಾಗಿರುವ ಮೊಬೈಲ್, ದೂರವಾಣಿ ಸೇವೆಯನ್ನು ಪುನಾರಂಭಿಸಲಾಗುತ್ತಿದೆ. ಇದರ ಜತೆಗೆ ಇಂಟರ್‌ನೆಟ್ ವ್ಯವಸ್ಥೆಯನ್ನೂ ಹೆಚ್ಚಿನ ಭಾಗಗಳಲ್ಲಿ ಸರಿಪಡಿಸಲಾಗಿದೆ ಎಂದು ದೂರಸಂಪರ್ಕ ಕಂಪನಿಗಳು ಹೇಳಿವೆ. ವಿದ್ಯುತ್, ರಸ್ತೆ ಸಂಪರ್ಕಗಳನ್ನು ಪುನಸ್ಥಾಪಿಸುವ ಕೆಲಸವೂ ಮುಂದುವರಿದಿದೆ. ವಾರ್ದ ಚಂಡಮಾರುತದ ವಿಚಾರ ರಾಜ್ಯಸಭೆಯಲ್ಲಿಯೂ ಪ್ರಸ್ತಾಪವಾಗಿ ತಮಿಳುನಾಡಿಗೆ ವಿಶೇಷ ಹಣಕಾಸು ನೆರವು ನೀಡಬೇಕೆಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು!
India Latest News Live: ಪಂಜಾಬ್‌ನ 3 ಸ್ಥಳಗಳಿನ್ನು ಪವಿತ್ರ ನಗರಿ: ಮದ್ಯ, ಮಾಂಸ ಸೇಲ್‌ ನಿಷೇಧ