ಹೀಗಿದೆ ರಾಹುಲ್-ಸಿದ್ದರಾಮಯ್ಯ ನಡುವಿನ ಕೆಮಿಸ್ಟ್ರಿ!

By Suvarna Web DeskFirst Published Dec 5, 2017, 5:33 PM IST
Highlights

ಗಾಂಧಿ ಕುಟುಂಬದ ನಾಯಕರು ಯಾವುದೇ ರಾಜ್ಯ ನಾಯಕನನ್ನು ಬರಸೆಳೆದು ಅಪ್ಪಿಕೊಳ್ಳುವ ಪರಂಪರೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಇಲ್ಲ. ಪಂಡಿತ್ ಜವಾಹರ್ ಲಾಲ್ ನೆಹರು ಬಿಡಿ ಪರಮೋಚ್ಚ ನಾಯಕರಾಗಿದ್ದರು. ಸಂಜಯ ಗಾಂಧಿ ಮತ್ತು ರಾಜೀವ್ ಗಾಂಧಿ ಕೂಡ ಮಿತ್ರರನ್ನು ಬಿಟ್ಟು ರಾಜ್ಯ ನಾಯಕರನ್ನು ಅಪ್ಪಿಕೊಂಡಿದ್ದು ಕಡಿಮೆ.

ರಾಹುಲ್ ಸಿದ್ದರಾಮಯ್ಯ ಆಲಿಂಗನ

ಗಾಂಧಿ ಕುಟುಂಬದ ನಾಯಕರು ಯಾವುದೇ ರಾಜ್ಯ ನಾಯಕನನ್ನು ಬರಸೆಳೆದು ಅಪ್ಪಿಕೊಳ್ಳುವ ಪರಂಪರೆ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಇಲ್ಲ. ಪಂಡಿತ್ ಜವಾಹರ್ ಲಾಲ್ ನೆಹರು ಬಿಡಿ ಪರಮೋಚ್ಚ ನಾಯಕರಾಗಿದ್ದರು. ಸಂಜಯ ಗಾಂಧಿ ಮತ್ತು ರಾಜೀವ್ ಗಾಂಧಿ ಕೂಡ ಮಿತ್ರರನ್ನು ಬಿಟ್ಟು ರಾಜ್ಯ ನಾಯಕರನ್ನು ಅಪ್ಪಿಕೊಂಡಿದ್ದು ಕಡಿಮೆ. ಇಂದಿರಾ ಮತ್ತು ಸೋನಿಯಾ ಮಹಿಳೆಯರು ಆದ್ದರಿಂದ ಅಂತಹ ಪ್ರಮೇಯವೇ ಉದ್ಭವವಾಗಿಲ್ಲ. ಯಾವುದೇ ನಾಯಕನಿಗೆ ಬಹಿರಂಗವಾಗಿ ಆಲಿಂಗಿಸಿಕೊಂಡರೆ ಉಳಿದವರಿಗೆ ಏನು ಸಂದೇಶ ಹೋಗುತ್ತದೆ ಎಂಬ ಕಾರಣವೂ ಇತ್ತು ಅನ್ನಿ. ಆದರೆ ನಿನ್ನೆ ಕಾಂಗ್ರೆಸ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್, ಸಿದ್ಧರಾಮಯ್ಯ ಅವರನ್ನು ಬರಸೆಳೆದು ಅಪ್ಪಿಕೊಂಡಿದ್ದು ನೋಡಿದರೆ, ಇಬ್ಬರ ನಡುವೆ ಕೆಮಿಸ್ಟ್ರಿ ಹೇಗಿದೆ ಎಂದು ಗೊತ್ತಾಗುತ್ತಿತ್ತು. ಕೆಲ ದಿನಗಳ ಹಿಂದೆ ಯುವ ಕಾಂಗ್ರೆಸ್ ನಾಯಕರ ಎದುರು ರಾಹುಲ್ ನಮಗೆ ಎಲ್ಲ ರಾಜ್ಯಗಳಲ್ಲಿ ಸಿದ್ಧರಾಮಯ್ಯ ತರಹದ ನಾಯಕರು ಬೇಕು ಎಂದು ಹೇಳಿದ್ದರಂತೆ. ಈ ಸಮೀಕರಣ ಇರುವುದರಿಂದಲೇ ಇರಬೇಕು ಸೋನಿಯಾರಿಂದ ನಿರ್ಣಯ ಅಧಿಕಾರ ರಾಹುಲ್ ಬಳಿ ಬಂದ ಮೇಲೆ ಸಿದ್ಧರಾಮಯ್ಯ ಕೇಳಿದ್ದಕ್ಕೆಲ್ಲ ಎಸ್‌ಎಸ್ ಎಂದು ಉತ್ತರ ಬರುತ್ತಿದೆ.

Latest Videos

 

ಪ್ರಶಾಂತ್ ನಾತು

(ಇಂಡಿಯಾ ಗೇಟ್ ಆಯ್ದ ಭಾಗ)

click me!