
ಬೆಂಗಳೂರು (ಡಿ.05): ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಕರ್ನಾಟಕದ, ಕನ್ನಡಿಗರ ನಂಬಿಕೆಯ ಪ್ರತೀಕ. ಚುನಾವಣೆ ವಿಚಾರಕ್ಕೆ ಬಂದರೆ, ಸುವರ್ಣ ನ್ಯೂಸ್'ಗೆ ಸುವರ್ಣ ನ್ಯೂಸ್ ವಾಹಿನಿಯೇ ಸರಿಸಾಟಿ. ಮತದಾರರ ಮನದಾಳದಲ್ಲಿ ಏನಿದೆ ಎಂದು ತಿಳಿಯುವ ವಿಷಯಕ್ಕೆ ಬಂದರೆ, ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಕ್ಕೆ ಸರಿಸಾಟಿ ಯಾರಿಹರು ಎಂದು ಗರ್ವದಿಂದ ಕೇಳೋಕೆ ನಮ್ಮ ಇತಿಹಾಸ ನಮ್ಮ ಜೊತೆಯಲ್ಲಿದೆ. ಅದು ಈ ಹಿಂದೆಯೂ ಸಾಬೀತಾಗಿದೆ.
ನಿಮಗೆ 2008ರ ಚುನಾವಣೆ ನೆನಪಿದೆ ತಾನೇ.. ಆಗ ರಾಜ್ಯದ ಹಲವು ಪತ್ರಿಕೆಗಳು, ರಾಷ್ಟ್ರೀಯ ಸುದ್ದಿವಾಹಿನಿಗಳು ನುಡಿದಿದ್ದ ಭವಿಷ್ಯವೇ ಬೇರೆ. ಸುವರ್ಣ ನ್ಯೂಸ್-ಕನ್ನಡಪ್ರಭ ಸಮೀಕ್ಷೆ ಹೇಳಿದ್ದೇ ಬೇರೆ.
2008ರಲ್ಲಿ ಸೃಷ್ಟಿಯಾಗಿತ್ತು ಇತಿಹಾಸ. ಕನ್ನಡಿಗರ ನಾಡಿಮಿಡಿತಕ್ಕೆ ಕನ್ನಡಿಯಾಗಿದ್ದೆವು..!
ಸುವರ್ಣ ನ್ಯೂಸ್-ಕನ್ನಡಪ್ರಭ- 2008 ಫಲಿತಾಂಶ V/S ಸಮೀಕ್ಷೆ
ಬಿಜೆಪಿ 110 104-114
ಕಾಂಗ್ರೆಸ್ 80 69-74
ಜೆಡಿಎಸ್ 28 35-40
ಸುವರ್ಣ ನ್ಯೂಸ್-ಕನ್ನಡಪ್ರಭ 2008ರಲ್ಲಿ ಚುನಾವಣೋತ್ತರ ಸಮೀಕ್ಷೆ ನಡೆಸಿತ್ತು. ಆಗಲೂ ಅಷ್ಟೆ. ಸಮೀಕ್ಷೆಯಲ್ಲಿ ಸುವರ್ಣ ನ್ಯೂಸ್ & ಕನ್ನಡ ಪ್ರಭ ಬಿಜೆಪಿಗೆ 104ರಿಂದ 114 ಸ್ಥಾನ ನೀಡಿತ್ತು. ಫಲಿತಾಂಶ ಬಂದಾಗ ಬಿಜೆಪಿ 110 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ಗೆ 69ರಿಂದ 74 ಸ್ಥಾನ ನೀಡಿದ್ದೆವು. ಫಲಿತಾಂಶ.. ನಿಮಗೂ ನೆನಪಿದೆ. ಕಾಂಗ್ರೆಸ್ 80 ಸ್ಥಾನ ಗೆದ್ದಿತ್ತು. ಜೆಡಿಎಸ್ಗೆ ಸಮೀಕ್ಷೆಯಲ್ಲಿ 35ರಿಂದ 40 ಸ್ಥಾನ ನೀಡಿದ್ದೆವು. ಫಲಿತಾಂಶ ಬಂದಾಗ, ಜೆಡಿಎಸ್ ಗಳಿಸಿದ್ದದ್ದು 40 ಸ್ಥಾನ. ಕನ್ನಡ ಪ್ರಭ, ಸುವರ್ಣ ನ್ಯೂಸ್ ಸಮೀಕ್ಷೆ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲೂ ಸುದ್ದಿಯಾಗಿತ್ತು. ಮೆಚ್ಚುಗೆ ಗಳಿಸಿತ್ತು.
2013ರಲ್ಲಿ ಮರುಕಳಿಸಿತ್ತು ಇತಿಹಾಸ..! ಮತ್ತೊಮ್ಮೆ ನಮ್ಮ ಭವಿಷ್ಯ ಸತ್ಯಕ್ಕೆ ಹತ್ತಿರದಲ್ಲಿತ್ತು..!
ಸುವರ್ಣ ನ್ಯೂಸ್-ಕನ್ನಡಪ್ರಭ 2013 ಫಲಿತಾಂಶ V/S ಸಮೀಕ್ಷೆ
ಕಾಂಗ್ರೆಸ್ 121 109-120
ಬಿಜೆಪಿ 40 49-60
ಜೆಡಿಎಸ್ 40 34-41
ಕೆಜೆಪಿ 06 05-12
ಇತರರು 16 10-15
2013ರಲ್ಲಿಯೂ ಅಷ್ಟೆ, ಸುವರ್ಣ ನ್ಯೂಸ್ ಮತ್ತೊಮ್ಮೆ ಕನ್ನಡಿಗರ ಮನಸ್ಸನ್ನು ಸ್ಪಷ್ಟವಾಗಿ ಗುರುತಿಸಿತ್ತು. ಆಗ ಕಾಂಗ್ರೆಸ್ ಗೆದ್ದಿದ್ದು 121ಸ್ಥಾನ. ನಮ್ಮ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ 109ರಿಂದ 120 ಸ್ಥಾನ ನೀಡಿದ್ದೆವು. ಬಿಜೆಪಿಗೆ 40 ಸ್ಥಾನ ಗೆದ್ದಿತ್ತು. ನಮ್ಮ ಸಮೀಕ್ಷೆಯಲ್ಲಿ ಬಿಜೆಪಿಗೆ ಸಿಕ್ಕಿದ್ದದ್ದು 49ರಿಂದ 60 ಸ್ಥಾನ. ಜೆಡಿಎಸ್ಗೂ 40 ಸ್ಥಾನ ಸಿಕ್ಕಿತ್ತು. ನಮ್ಮ ಸಮೀಕ್ಷೆಯಲ್ಲಿ ಜೆಡಿಎಸ್ಗೆ 34 ರಿಂದ 41 ಸ್ಥಾನ ನೀಡಲಾಗಿತ್ತು. ಕೆಜೆಪಿ 5ರಿಂದ 12 ಸ್ಥಾನ ಗೆಲ್ಲಬಹುದು ಎಂದು ಹೇಳಿದ್ದೆವು. ಕೆಜೆಪಿ ಗೆದ್ದಿದ್ದು 6 ಸ್ಥಾನ ಮಾತ್ರ. ಪಕ್ಷೇತರರು, ಇತರರಿಗೆ 10ರಿಂದ 15 ಸ್ಥಾನ ನೀಡಿದ್ದೆವು. ಫಲಿತಾಂಶ ಬಂದಾಗ ಇತರರು 16 ಸ್ಥಾನಗಳಲ್ಲಿ ಗೆದ್ದಿದ್ದರು.
ಇದುವರೆಗೆ ಇಷ್ಟು ಕರಾರುವಾಕ್ಕಾಗಿ ಜನರ ನಾಡಿಮಿಡಿತ ಅರ್ಥೈಸಿಕೊಂಡ ಕನ್ನಡದ ಇನ್ನೊಂದು ಸುದ್ದಿ ಸಂಸ್ಥೆ ಇಲ್ಲ ಎನ್ನುವುದು ನಮ್ಮ ಹೆಮ್ಮೆ. ಈ ಬಾರಿಯೂ ಅಷ್ಟೆ, ಕರ್ನಾಟಕದ, ಕನ್ನಡಿಗರ ನಾಡಿಮಿಡಿತವನ್ನು ಸ್ಪಷ್ಟವಾಗಿ ಅರಿತುಕೊಡಿದ್ದೇವೆ ಎಂಬ ಹೆಮ್ಮೆಯೊಂದಿಗೇ ಮೊದಲ ಹಂತದ ಸಮೀಕ್ಷೆಯನ್ನು ನಿಮ್ಮೆದುರು ಇಡುತ್ತಿದ್ದೇವೆ. ನೇರ, ದಿಟ್ಟ, ನಿರಂತರ ಸುದ್ದಿಗೆ ನೋಡ್ತಾ ಇರಿ ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.