'ಖುಷ್ಬು' ವಿರುದ್ಧ ಆರೋಪಪಟ್ಟಿ ಸಲ್ಲಿಕೆ

Published : Jan 27, 2017, 04:48 PM ISTUpdated : Apr 11, 2018, 12:38 PM IST
'ಖುಷ್ಬು' ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಸಾರಾಂಶ

ವಕೀಲ ವೃತ್ತಿಯ ಘನತೆ, ಗೌರವ ದುರ್ಬಳಕೆ ಮಾಡಿದ್ದ  ವಕೀಲಿ ಕೋಟ್, ಗೌನ್, ಬಿಳಿ ಬ್ಯಾಂಡ್,ಮೊಬೈಲ್, ಲ್ಯಾಪ್​​ಟಾಪ್​​, ಐಪಾಡ್​​​ಗಳು ಮತ್ತಿತರ ಪ್ರಮುಖ ಸಾಕ್ಷ್ಯಗಳ ವಿವರಗಳನ್ನು ಒಳಗೊಂಡಂತೆ ಬೆಲೆ ಬಾಳುವ ವಸ್ತುಗಳನ್ನು ಹಣವನ್ನು ಲಪಟಾಯಿಸಿದ ವಿವರವನ್ನು ಪೊಲೀಸರು ಹಾಜರುಪಡಿಸಿದ್ದಾರೆ.

ನಕಲಿ ಐಎಎಸ್ ಅಧಿಕಾರಿ, ವಕೀಲೆ ಹೀಗೆ ಹತ್ತಾರು ವೇಷದಲ್ಲಿ ವಂಚಿಸಿದ್ದ ಖುಷ್ಬು ಶರ್ಮಾ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸರಿಂದ ಚಾರ್ಚ್ ಶೀಟ್ ಸಲ್ಲಿಕೆಯಾಗಿದ್ದು, ನ್ಯಾಯಾಲಯಕ್ಕೆ ಸುಧೀರ್ಘ ಆರೋಪಪಟ್ಟಿ ಸಲ್ಲಸಲಾಗಿದೆ. ಕಳೆದ ನವೆಂಬರ್​ 4ರಂದು ಪುಲಿಕೇಶಿ ನಗರ ಪೊಲೀಸರು ಖುಷ್ಬುಳನ್ನು ಬಂಧಿಸಿದ್ದರು.

ಬೆಂಗಳೂರಿನಲ್ಲಿ ಸಾಕಷ್ಟು ಜನರಿಗೆ ಕ್ರಿಮಿನಲ್ ವಕೀಲೆಯಂದು ನಂಬಿಸಿ ಮೋಸ ಮಾಡಿದ್ದಳು. ವಕೀಲ ವೃತ್ತಿಯ ಘನತೆ, ಗೌರವ ದುರ್ಬಳಕೆ ಮಾಡಿದ್ದ  ವಕೀಲಿ ಕೋಟ್, ಗೌನ್, ಬಿಳಿ ಬ್ಯಾಂಡ್,ಮೊಬೈಲ್, ಲ್ಯಾಪ್​​ಟಾಪ್​​, ಐಪಾಡ್​​​ಗಳು ಮತ್ತಿತರ ಪ್ರಮುಖ ಸಾಕ್ಷ್ಯಗಳ ವಿವರಗಳನ್ನು ಒಳಗೊಂಡಂತೆ ಬೆಲೆ ಬಾಳುವ ವಸ್ತುಗಳನ್ನು ಹಣವನ್ನು ಲಪಟಾಯಿಸಿದ ವಿವರವನ್ನು ಪೊಲೀಸರು ಹಾಜರುಪಡಿಸಿದ್ದಾರೆ.

ಕೇವಲ 8ನೆ ತರಗತಿ ಓದಿದ್ದರೂ  ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಿದ್ದಳು. ಈಕೆ ಸಂತ್ರಸ್ತರು ಕೊಟ್ಟ ಹಣ ವಾಪಸ್ ಕೇಳಿದರೆ ಅತ್ಯಾಚಾರದ ಕೇಸು ದಾಖಲಿಸುತ್ತಿದ್ದಳು. ಉದ್ಯೋಗ ಮಾಡದೇ ವಂಚಿಸಿ ಹೆದರಿಸಿ ಜನರಿಂದ ಲಪಟಾಯಿಸಿದ ಹಣದಿಂದಲೇ ಮೋಜು-ಮಸ್ತಿ ಮಾಡುತ್ತಿದ್ದಳು. ಬೆಂಗಳೂರು ಮಾತ್ರವಲ್ಲದೆ ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸಗಡ, ತೆಲಂಗಾಣ, ಆಂಧ್ರ ಸೇರಿ ಸಾಕಷ್ಟು ರಾಜ್ಯಗಳಲ್ಲಿ  ಈಕೆ ವಂಚನೆ ನಡೆಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಟಾದ ತಾಜ್‌, ಐಟಿಸಿಗೆ ಅದಾನಿ ಗ್ರೂಪ್ ಟಕ್ಕರ್, ಐಷಾರಾಮಿ ಹೋಟೆಲ್‌ ಉದ್ಯಮಕ್ಕೆ ಎಂಟ್ರಿ, ಏರ್ಪೋರ್ಟ್‌ಗಳೇ ಟಾರ್ಗೆಟ್!
ಬೆಂಗಳೂರು ಕಾಲೇಜಿನಲ್ಲಿ ಹಾಜರಾತಿ ಹಗರಣ; ಅಲಯನ್ಸ್ ವಿವಿ ದೂರು, 6 ಜನರ ವಿರುದ್ಧ ಎಫ್‌ಐಆರ್!