ಭಾರತಮಾತಾ ಕೀ ಜೈ’ ಟೀಕೆ: ಹೊಸ ವಿವಾದ ಸೃಷ್ಟಿಸಿದ ಚಂಪಾ

First Published May 28, 2018, 9:37 AM IST
Highlights

ಆರೆಸ್ಸೆಸ್ ಟೀಕಿಸುವ ಭರದಲ್ಲಿ ‘ಭಾರತ ಮಾತಾ ಕೀ ಜೈ’ ಘೋಷಣೆಯನ್ನು ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಲೇವಡಿ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. 

ಬೆಂಗಳೂರು :  ಆರೆಸ್ಸೆಸ್ ಟೀಕಿಸುವ ಭರದಲ್ಲಿ ‘ಭಾರತ ಮಾತಾ ಕೀ ಜೈ’ ಘೋಷಣೆಯನ್ನು ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಲೇವಡಿ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಮಾತನಾಡಿ, ವಂದೇ ಮಾತರಂ ಗೀತೆಯನ್ನು ಚಡ್ಡಿಗಳು ಹೈಜಾಕ್ ಮಾಡಿದ್ದಾರೆ. ಭಾರತ ಮಾತೆ
ಇಂದು ಭಾರತ ಮಾತೆ ಆಗಿ ಉಳಿದಿಲ್ಲ. ಹಿಂದೂ ಮಾತೆ ಆಗಿದ್ದಾಳೆ. ಹರ ಹರ ಮಹಾದೇವ, ಜೈ ಶ್ರೀರಾಮ, ಭಾರತ ಮಾತಾ ಕೀ ಜೈ ಘೋಷಣೆ ಕೇಳಿ ಬಂದರೆ ಅಲ್ಲಿ ಚಡ್ಡಿಗಳು ಬಂದವೆಂದು ಅರ್ಥ ಮಾಡಿಕೊಳ್ಳಬೇಕು. 

ಇಂದು ನಾವೆಲ್ಲ ಭಾರತ ಮಾತೆ ಮಕ್ಕಳು ಎಂದು ಹೇಳುತ್ತಾರೆ. ಆದರೆ ಮಾತೆಯಿಂದ ಮಾತ್ರ ನಾವು ಹುಟ್ಟಿಲ್ಲ, ತಂದೆಯೂ ಬೇಕೇ ಬೇಕು’’ ಎಂದು ಹೇಳಿದರು. ಇಂದು ಗಾಂಧೀಜಿ ರಾಷ್ಟ್ರಪಿತ. ಹೀಗಾಗಿ ಅವರು ಭಾರತದ ಪಿತಾ. ಡಾ. ಅಂಬೇಡ್ಕರರು ಭಾರತ ಭಾಗ್ಯ ವಿಧಾತರು. ಆದ್ದರಿಂದ ನಾವು ಭಾರತ ಮಾತಾ ಕೀ ಜೈ ಜೊತೆಗೆ ಪಿತಾಕಿ ಮತ್ತು ಭಾರತ ಭಾಗ್ಯ ವಿಧಾತಾ ಕೀ ಜೈ ಅಂತಾನೂ ಹೇಳಿಬೇಕಿದೆ ಎಂದು ಚಂಪಾ ಪ್ರತಿಪಾದನೆ ಮಾಡಿದರು. 

ಪ್ರಸಕ್ತ ರಾಜಕೀಯ ಪ್ರಸ್ತಾಪಿಸಿದ ಚಂಪಾ, ಯಡಿಯೂರಪ್ಪನವರನ್ನು ಹೊಗಳಿದರು. ಯಡಿಯೂರಪ್ಪ ಹೋರಾಟದ ಮೂಲಕವೇ ಬದುಕು ಕಟ್ಟಿಕೊಂಡ ಧೀಮಂತ ವ್ಯಕ್ತಿ. ಯಡಿಯೂರಪ್ಪ ಜೈ ಶ್ರೀರಾಮ ಅಂದಿಲ್ಲ. ಅಯೋಧ್ಯೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರೈತರ ಬಗ್ಗೆ ಕಾಳಜಿ ಹೊಂದಿದವರು. ಒಬ್ಬ ಒಳ್ಳೆ ಜನನಾಯಕ ಆಗಿದ್ದರೂ ಬಿಜೆಪಿಯಲ್ಲಿರುವ ಕೆಲವರ ಕೈಗೆ ಸಿಕ್ಕು ಚಿಂತಾಜನಕ ಸ್ಥಿತಿಗೆ ಬಂದಿದ್ದಾರೆ ಎಂದರು.

ಮೇಳದ ಸಮಾರೋಪದಲ್ಲಿ ಬಂಡ್ರಿ ಸಮಾಜಮುಖಿ  ಶ್ರಮಜೀವಿ ಪ್ರಶಸ್ತಿಯನ್ನು ಲೇಖಕಿ ಕೆ. ನೀಲಾ ಅವರಿಗೆ ಹಾಗೂ ತೊಗಲ ಚೀಲದ ಕರ್ಣ ಕೃತಿಯ ಲೇಖಕ ಎಚ್. ಲಕ್ಷ್ಮೀ ನಾರಾಯಣಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

click me!