ಎನ್'ಡಿಎ'ಗೆ ಗುಡ್'ಬೈ ಹೇಳಿದ ಟಿಡಿಪಿ: ನಾವು ಅನ್ಯಾಯ ಸಹಿಸುವುದಿಲ್ಲ ಎಂದ ನಾಯ್ಡು

By Suvarna Web deskFirst Published Mar 7, 2018, 11:34 PM IST
Highlights

ಆರ್ಥಿಕ ಸಂಕಷ್ಟದಲ್ಲಿರುವ ಆಂಧ್ರಪ್ರದೇಶಕ್ಕೆ ವಿಶೇಷಸ್ಥಾನ ಈಗ ಅಗತ್ಯ. 2014ರಲ್ಲಿ ಪ್ರತ್ಯೇಕ ರಾಜ್ಯವಾದ ಬಳಿಕ ಆಂಧ್ರಪ್ರದೇಶಕ್ಕೆ ಆರ್ಥಿಕ ಕಷ್ಟ ಎದುರಾಗಿದೆ.

ಹೈದರಾಬಾದ್(ಮಾ.07): ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿಕೆ ನಿಡಿದ ಬೆನ್ನಲ್ಲೆ ಎನ್'ಡಿಎ ನೇತೃತ್ವದ ಬಿಜೆಪಿ ಮೈತ್ರಿಕೂಟದಿಂದ ಹೊರಬರಲು ಟಿಡಿಪಿ ನಿರ್ಧರಿಸಿದೆ. ಅಮರಾವತಿಯಲ್ಲಿ ಸುದ್ದಿಗೋಷ್ಠಿ  ನಡೆಸಿದ  ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಹಿತದೃಷ್ಟಿಯೇ ಮುಖ್ಯ"

ಆಂಧ್ರಪ್ರದೇಶದ ಜನತೆಗೆ ಅನ್ಯಾಯ ಆಗುವುದಕ್ಕೆ ಬಿಡುವ ಪ್ರಶ್ನೆಯಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಆಂಧ್ರಪ್ರದೇಶಕ್ಕೆ ವಿಶೇಷಸ್ಥಾನ ಈಗ ಅಗತ್ಯ. 2014ರಲ್ಲಿ ಪ್ರತ್ಯೇಕ ರಾಜ್ಯವಾದ ಬಳಿಕ ಆಂಧ್ರಪ್ರದೇಶಕ್ಕೆ ಆರ್ಥಿಕ ಕಷ್ಟ ಎದುರಾಗಿದೆ. ಕೇಂದ್ರದಿಂದ ವಿಶೇಷ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಮೈತ್ರಿ ಮುರಿದುಕೊಳ್ಳುತ್ತಿದ್ದೇವೆ'ಎಂದು ತಿಳಿಸಿದರು.

ನಾಳೆ ಇಬ್ಬರು ಕೇಂದ್ರ ಸಚಿವರ ರಾಜೀನಾಮೆ

ಮೊದಲನೇ ಹಂತದಲ್ಲಿ ಕೇಂದ್ರದಲ್ಲಿ ಸಚಿವರಾಗಿರುವ ಅಶೋಕ್ ಗಜಪತಿರಾಜು, ವೈ.ಎಸ್.ಚೌದರಿ ನಾಳೆ ರಾಜೀನಾಮೆ ನೀಡಲಿದ್ದಾರೆ. ಈಗಲಾದರೂ ಕೇಂದ್ರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಮುಂದೆ ಈ ಬಗ್ಗೆ ಕೇಂದ್ರ ಏನು ನಿರ್ಧಾರ ಕೈಗೊಳ್ಳುತ್ತೋ ನೋಡುತ್ತೇವೆ. ಆಗಲೂ ಕೇಂದ್ರ ಸ್ಪಂದಿಸದಿದ್ದರೆ ನಮ್ಮ ಅಧಿಕೃತ ನಿರ್ಧಾರ ಪ್ರಕಟಿಸುತ್ತೆವೆ' ಎಂದು ತಿಳಿಸಿದರು.

ಮೋದಿ ಅವರ ಸಂಪರ್ಕಕ್ಕೆ ಯತ್ನ

ಎನ್'ಡಿ'ಎ ಮೈತ್ರಿ ಕಳೆದುಕೊಳ್ಳುತ್ತಿರುವ ಬಗ್ಗೆ ಪ್ರಧಾನಿಗೆ ತಿಳಿಸುವುದಕ್ಕೆ ಪ್ರಯತ್ನ ನಡೆಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರಧಾನಿ ಅವರ ಕಾರ್ಯಾಲಯದ ಅಧಿಕಾರಿಗಳ ಸಂಪರ್ಕಕ್ಕೂ ಸಹ ಯತ್ನಸಿದ್ದೆವು. ಸೌಜನ್ಯಕ್ಕೆ ಮೋದಿ ಜತೆಗೆ ಮಾತನಾಡಲು ಯತ್ನಿಸಿದ್ದೆ, ಆದರೆ ಸಾಧ್ಯವಾಗಿಲ್ಲ'ಎಂದು ತಿಳಿಸಿದರು.

click me!