
ಬೆಂಗಳೂರು (ಮಾ. 07): ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಮುಖ್ಯಮಂತ್ರಿಗಳು ಮೇಜರ್ ಸರ್ಜರಿ ಮಾಡಿದೆ. ರೋಹಿಣಿ ಸಿಂಧೂರಿ ಸೇರಿ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ರಾಜ್ಯಾದ್ಯಂತ ಮತದಾರರ ಪಟ್ಟಿ ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಕೊನೆಗೂ ರೋಹಿಣಿ ಸಿಂಧೂರಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.
ರೋಹಿಣಿ ಸಿಂಧೂರಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಆಯುಕ್ತ ಹುದ್ದೆ ನೀಡಲಾಗಿದೆ. ತಿಂಗಳಿನ ಹಿಂದೆಯೇ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸರ್ಕಾರ ಆದೇಶಿಸಿತ್ತು. ಚುನಾವಣೆ ಆಯೋಗ ಆಕ್ಷೇಪ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾಗಿಯೇ ಮುಂದುವರೆದಿದ್ದರು.
12 ಐಎಎಸ್ ಅಧಿಕಾರಿಗಳ ವರ್ಗಾವಣೆ
ರಂದೀಪ್.ಡಿ - ಹಾಸನ ಜಿಲ್ಲಾಧಿಕಾರಿ
ಕಾವೇರಿ ಬಿ.ಬಿ. - ಚಾಮರಾಜನನಗರ ಜಿಲ್ಲಾಧಿಕಾರಿ
ಶೆಟ್ಟಣ್ಣವರ್ ಎಸ್.ಬಿ. - ವಿಜಯಪುರ ಜಿಲ್ಲಾಧಿಕಾರಿ
ಶಿವಕುಮಾರ್ ಕೆ.ಬಿ. - ಮೈಸೂರು ಜಿಲ್ಲಾಧಿಕಾರಿ
ರಾಮು ಬಿ - ಆಯುಕ್ತರು, ಪಶು ಸಂಗೋಪನಾ ಇಲಾಖೆ
ಕ್ಯಾಪ್ಟನ್ ಡಾ.ಕೆ.ರಾಜೇಂದ್ರ - ರಾಮನಗರ ಜಿಲ್ಲಾಧಿಕಾರಿ
ಡಾ.ಮಮತಾ ಬಿ.ಆರ್. - ಎಂಬಿ, ಕೆಎಸ್ ಡಿಎಲ್, ಬೆಂಗಳೂರು
ಡಾ.ಎನ್.ಶಿವಶಂಕರ್ - ಆಯುಕ್ತರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ
ಡಾ.ಅರುಂಧತಿ ಚಂದ್ರಶೇಖರ್ - ಆಯುಕ್ತರು, ಆಹಾರ ಮತ್ತು ನಾಗರಿಕ ಇಲಾಖೆ
ಆರ್.ಲತಾ - ಸಿಇಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್
ದಯಾನಂದ್ ಕೆ - ಬೆಂಗಳೂರು ನಗರ ಜಿಲ್ಲಾಧಿಕಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.