
ಬೆಂಗಳೂರು (ಮಾ. ೦7): ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯವರಿಗೆ ಚಾಕುವಿನಿಂದ ಇರಿದ ತೇಜ್ ರಾಜ್ ಶರ್ಮಾ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್’ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 307 - ಕೊಲೆ ಯತ್ನ, 353 - ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, 506 ಬಿ- ಜೀವ ಬೆದರಿಕೆ, 120 ಬಿ - ಅಪರಾಧಕ್ಕೆ ಒಳಸಂಚು, 143 - ಕಾನೂನುಬಾಹಿರವಾಗಿ ಸೇರುವುದು 147 - ಗಲಭೆ ಕೃತ್ಯ, 343 -ಕಾನೂನುಬಾಹಿರವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೃತ್ಯ ಅಡಿಯಲ್ಲಿ ತೇಜಸ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈಗಾಗಲೇ ಆರೋಪಿ ತೇಜಸ್ ಶರ್ಮಾಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮುಕ್ತಾಯಗೊಂಡಿದೆ. ನಾಳೆ ಮಧ್ಯಾಹ್ನ ಕೋರ್ಟ್ ಕಟಕಟೆಗೆ ಕರೆದುಕೊಂಡು ಹೋಗಲಾಗುತ್ತದೆ.
ನಾಳೆ ಮಧ್ಯಾಹ್ನ 8ನೇ ಎಸಿಎಂಎಂ ಕೋರ್ಟ್ ಗೆ ಆರೋಪಿ ತೇಜ್ ರಾಜ್ ಶರ್ಮಾರನ್ನು ಹಾಜರುಪಡಿಸಲು ಸಿದ್ಧತೆ ನಡೆದಿದೆ. ಎರಡು ದಿನಗಳ ಕಾಲ ವಿಚಾರಣೆಗೆ ನ್ಯಾಯಾಲಯಕ್ಕೆ ಕೋರಲು ನಿರ್ಧಾರ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.