ಏರ್ ಶೋ ವೇಳೆ ಭಾರಿ ಅಗ್ನಿ ಅವಘಡ : ಕಾರಣವೇನು..?

By Web DeskFirst Published Feb 23, 2019, 3:35 PM IST
Highlights

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ ನಲ್ಲಿ ಭಾರೀ ಅಗ್ನಿ ಅವಘಢ ಸಂಭವಿಸಿದ್ದು, ಈ ಅವಘಡಕ್ಕೆ ಕಾರಣ ಅಲ್ಲಿರುವ ಒಣಗಿದ ಹುಲ್ಲಾಗಿರಬಹುದೆಂದು ಶಂಕಿಸಲಾಗಿದೆ. 

ಬೆಂಗಳೂರು : ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 300ಕ್ಕೂ ಅಧಿಕ ಕಾರುಗಳು ಭಸ್ಮವಾಗಿವೆ. ಭಾರೀ ಬೆಂಕಿ ಅವಘಡಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. 

ಆದರೆ ಪಾರ್ಕಿಂಗ್ ಪ್ರದೇಶದಲ್ಲಿ ಒಣಗಿದ ಹುಲ್ಲು ಇದ್ದು, ಭಾರೀ ಗಾಳಿ ಬೀಸುತ್ತಿದ್ದುದೆ ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಈ ಬಗ್ಗೆ ಅಗ್ನಿಶಾಮಕ ದಳ ಮಹಾನಿರ್ದೇಶಕರಾದ ಎಂ.ಎನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. 

ಈಗಾಗಲೇ ಅವಘಡದಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿದ್ದು, ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.  ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ. 

ಯಲಹಂಕವಾಯುನೆಲೆಯಲ್ಲಿ ಫೆ. 20ರಿಂದ ಏರೋ ಇಂಡಿಯಾ ಶೋ ಆರಂಭವಾಗಿದ್ದು, 24ರವರೆಗೆ ನಡೆಯುತ್ತಿದೆ. ತಾಲೀಮಿನ ವೇಳೆಯೂ ಸೂರ್ಯ ಕಿರಣ್ ಯುದ್ಧ ವಿಮಾನ ಅವಘಡಕ್ಕೆ ತುತ್ತಾಗಿದ್ದು,ಓರ್ವ ಪೈಲಟ್ ಮೃತಪಟ್ಟಿದ್ದರು.  ಇದೀಗ ಮತ್ತೊಂದು  ಅವಘಡ ಸಂಭವಿಸಿದೆ. 

 


Totally about 100 cars burnt in the fire. Fire spread is controlled by creating a gap by removing adjacent cars. Fire under control now. No injuries or any harm to people reported. Likely cause: dry grass fire aided by heavy winds.

— M.N.Reddi, IPS (@DGP_FIRE)


Fire fully extinguished one hour ago. Cooling operations of the nearby areas also completed now.

— M.N.Reddi, IPS (@DGP_FIRE)
click me!