ಸ್ವಿಸ್ ಬ್ಯಾಂಕ್‌ನಲ್ಲಿ ಅಕ್ರಮ ಹಣ ಇಟ್ಟ ಚಂದಮಾಮದ ಹೊಸ ಮಾಲೀಕರು!

By Web DeskFirst Published Mar 11, 2019, 11:03 AM IST
Highlights

ಚಂದಮಾಮ ನಿಯತಕಾಲಿಕೆಯ ಮಾಲೀಕರ ವಿರುದ್ಧ ಸ್ವಿಸ್ ಬ್ಯಾಂಕಿನಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಆರೋಪ

ನವದೆಹಲಿ[ಮಾ.11]: ದಶಕಗಳಿಂದ ಪುರಾಣದ ಕತೆಗಳ ಮೂಲಕ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ತಿಳಿಹೇಳುತ್ತಿರುವ ಕಾರಣಕ್ಕೆ ಚಂದಮಾಮ ನಿಯತಕಾಲಿಕೆ ಮನೆಮಾತಾಗಿದೆ. ಆದರೆ, ಚಂದಮಾಮ ನಿಯತಕಾಲಿಕೆಯ ಮಾಲೀಕರು ಸ್ವಿಸ್ ಬ್ಯಾಂಕಿನಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಆರೋಪಕ್ಕೆ ಸಿಲುಕಿದ್ದಾರೆ.

2007ರಲ್ಲಿ ಚಂದಮಾಮ ನಿಯತಕಾಲಿಕೆಯನ್ನು ಸ್ವಾಧೀನಪಡಿಸಿಕೊಂಡ ಮುಂಬೈ ಮೂಲದ ಜಿಯೋಡೆಸಿಕ್ ಲಿಮಿಟೆಡ್‌ನ ಮೂವರು ನಿರ್ದೇಶಕರ ವಿರುದ್ಧ ಭಾರತೀಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಹಾಗೂ ಇತರ ಹಣಕಾಸು ಅವ್ಯವ ಹಾರಗಳ ಆರೋಪದಡಿ ತನಿಖೆ ಕೈಗೊಂಡಿದ್ದಾರೆ.

ಸ್ವಿಜರ್‌ಲ್ಯಾಂಡ್ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಆಡಳಿ ತಾತ್ಮಕ ನೆರವು ನೀಡುವುದಾಗಿ ತಿಳಿಸಿದೆ.

click me!