ಬೆಂಗಳೂರಿನ ಮೊದಲ ಬಡಾವಣೆಗೆ 125ರ ಸಂಭ್ರಮ

Published : Jan 24, 2017, 06:03 AM ISTUpdated : Apr 11, 2018, 12:59 PM IST
ಬೆಂಗಳೂರಿನ ಮೊದಲ ಬಡಾವಣೆಗೆ 125ರ ಸಂಭ್ರಮ

ಸಾರಾಂಶ

1892ರಲ್ಲಿ ಹತ್ತನೇ ಚಾಮರಾಜ ಒಡೆಯರ್‌ರಿಂದ ಚಾಮರಾಜಪೇಟೆ ನಿರ್ಮಾಣಕ್ಕೆ ಅಂಕಿತ 1936ರಲ್ಲಿ ಬಡಾವಣೆ ನಿರ್ಮಾಣ, ಚದರಂಗದ ಆಕಾರದಲ್ಲಿ ನಿರ್ಮಿಸಿರುವುದು ವಿಶೇಷತೆ ವಿ. ಸೀತಾರಾಮಯ್ಯ, ಕೈಲಾಸಂ, ಭಾಗವತರ್‌ ಮೊದಲಾದ ಮಹನೀಯರ ವಾಸಸ್ಥಳ ಇದು ಇಂದಿನ ವಿನ್ಯಾಸಕಾರರಿಗೂ ಬೆರಗು ಮೂಡಿಸುವಂಥ ರಸ್ತೆಗಳು, ಐತಿಹಾಸಿಕ ಸ್ಮಾರಕಗಳನ್ನು ಒಳಗೊಂಡಿರುವುದು ವಿಶೇಷ. ಅಂತಹ ಬಡಾವಣೆಯ 125 ವರ್ಷಾಚರಣೆಯನ್ನು ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿದೆ

-ಎಸ್‌ ಎಸ್‌ ಕಾವೇರಿ, ಬೆಂಗಳೂರು
ರಾಜಧಾನಿಯ ಮೊದಲ ಬಡಾವಣೆ ಚಾಮರಾಜಪೇಟೆಗೆ ಈಗ 125ರ ಸಂಭ್ರಮ. ಚಾಮರಾಜಪೇಟೆಯ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಚಾಮರಾಜಪೇಟೆ 125ನೆಯ ವರ್ಷಾಚರಣೆ ಸಮಿತಿ ಜ. 28 ಮತ್ತು 29ರಂದು ಅದ್ಧೂರಿ ವರ್ಷಾಚರಣೆ ಆಚರಿಸಲು ಸಿದ್ಧತೆ ನಡೆಸುತ್ತಿದೆ. 
ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಡಾ. ಪ್ರಮೋದಾ ದೇವಿ ಒಡೆಯರ್‌, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮಹಾರಾಣಿ ತ್ರಿಷಿಕಾ ಕುಮಾರಿ ದೇವಿ ಪಾಲ್ಗೊಳ್ಳುತ್ತಿದ್ದಾರೆ. ಸಚಿವ ಕೆ.ಜೆ. ಚಾರ್ಜ್, ಸಮಾರೋಪದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ನಟಿ ಬಿ. ಸರೋಜಾದೇವಿ, ಜಯಂತಿ ಭಾಗವಹಿಸಲಿದ್ದಾರೆ. ಅಂದು ಬೆಳಗ್ಗೆ 30 ವಿವಿಧ ಜಾನಪದ ಕಲಾ ತಂಡಗಳು, ಶಾಲಾ -ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವರ್ಷಾಚರಣೆ ಸ್ಮರಣಾಥ 125 ಜನರಿಗೆ ಸನ್ಮಾನ, ಬಡಾವಣೆಯನ್ನು ಇನ್ನಷ್ಟುಹಸಿರುಮಯಗೊಳಿಸಲು ಗಿಡ ನೆಡುವಿಕೆ ಮುಂತಾದ ಕಾರ್ಯಕ್ರಮ ಆಯೋಜಿಸಿದೆ.
ವೈಶಿಷ್ಟ್ಯತೆಯ ಗೂಡು

1892ರಲ್ಲಿ ಹತ್ತನೇ ಚಾಮರಾಜ ಒಡೆಯರ್‌ ಅವರು ಪ್ರಥಮ ಬಾರಿಗೆ ಚಾಮರಾಜಪೇಟೆ ನಿರ್ಮಾಣಕ್ಕೆ ಅಂಕಿತ ಹಾಡಿದರು. ಮುಂದಿನ ತಲೆಮಾರಿಗೂ ಮಾದರಿಯಾಗುವಂಥ ಬಡಾವಣೆ ರೂಪಿಸಬೇಕೆಂಬ ಕಲ್ಪನೆ ಹಾಗೂ ಚಿಂತನೆ ಚಾಮರಾಜಪೇಟೆ ಜನ್ಮತಳೆಯಲು ಕಾರಣವಾಯಿತು. ಈ ಬಡಾವಣೆಯನ್ನು ಚದುರಂಗದ ಆಕಾರದಲ್ಲಿ ನಿರ್ಮಿಸಿರುವುದು ವಿಶೇಷ. ಇದು 30 ಅಡಿ ಅಗಲ ಹಾಗೂ 108 ಉದ್ದದ 6 ಪ್ರಮುಖ ರಸ್ತೆಗಳು, 9 ಕ್ರಾಸ್‌ಗಳನ್ನು ಒಳಗೊಂಡಿದೆ. ಪ್ರತಿ ಮುಖ್ಯರಸ್ತೆಗಳ ಹಿಂಭಾಗದಲ್ಲೂ ಸುರಕ್ಷಿತವಾದ ಪಂಕ್ತಿಗಳಿವೆ. ರಸ್ತೆಗಳ ಇಕ್ಕೆಲಗಳಲ್ಲಿ ದೊಡ್ಡಮಟ್ಟದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿರುವುದು ಅಂದಿನ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಚಾಮರಾಜಪೇಟೆಗೆ ಮಹಾರಾಜ ಚಾಮರಾಜ ಒಡೆಯರ್‌ ಅವರ ಹೆಸರನ್ನೇ ನಾಮಕರಣ ಮಾಡಲಾಯಿತು. ಆಗ ಚಾಮರಾಜೇಂದ್ರ ಪೇಟೆ ಎಂದು ಕರೆಯಲಾಗುತ್ತಿತ್ತು. ಆದರೆ, ಕಾಲಘಟ್ಟದಲ್ಲಿ ಅದನ್ನು ಚಾಮರಾಜಪೇಟೆಯಾಗಿ ಬದಲಾಗಿದೆ. ಇದಕ್ಕೆ ಸಾಕ್ಷಿ 1931ರಲ್ಲಿ ಪ್ರಕಟವಾದ ‘ಮುನ್ಸಿಪಾಲ್‌ ಹ್ಯಾಂಡ್‌ ಬುಕ್‌' ಎನ್ನುತ್ತಾರೆ ಎಂ. ಶ್ರೀನಿವಾಸಮೂರ್ತಿ.
ಮಹನೀಯರ ವಾಸಸ್ಥಳ

ಮಲ್ಲೇಶ್ವರ, ಬಸವನಗುಡಿ, ಶ್ರೀರಾಮಪುರ, ವಿಶ್ವೇಶ್ವರಪುರ ಹೀಗೆ ಪುರಾತನ ಹಿನ್ನಲೆಯುಳ್ಳ ಐತಿಹಾಸಿಕ ಬಡಾವಣೆಗಳನ್ನು ಬೆಂಗಳೂರು ನಗರ ಒಳಗೊಂಡಿದೆ. ಆದರೆ, ಇದೇ ಮೊದಲು 125 ವರ್ಷಾಚರಣೆ ಆಚರಿಸಿಕೊಳ್ಳುತ್ತಿರುವ ಹೆಗ್ಗಳಿಕೆಯನ್ನು ಚಾಮರಾಜಪೇಟೆ ಹೊಂದಿದೆ. ಈ ಕ್ಷೇತ್ರದಲ್ಲಿ ವಿ. ಸೀತಾರಾಮಯ್ಯ, ಎಂ.ಆರ್‌. ಶ್ರೀನಿವಾಸಮೂರ್ತಿ, ಕರ್ಪೂರ ಶ್ರೀನಿವಾಸರಾಯರು, ಟಿ.ಪಿ. ಕೈಲಾಸಂ, ಸುಭೋದ ರಾಮರಾಯರು, ಹೊನ್ನಪ್ಪ ಭಾಗವತರ್‌ ಮುಂತಾದ ಮಹನೀಯರು ವಾಸ ಸ್ಥಳವಾಗಿದೆ. ಮೈಸೂರು ಸಂಸ್ಥಾನದ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್‌ ಆಗಿದ್ದ ಕರ್ಪೂರ ಶ್ರೀನಿವಾಸರಾಯರು ಇದರ ನಿರ್ಮಾಣದ ಹೊಣೆ ಹೊತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಧುನಿಕ ಭಾರತದ ಶಿಲ್ಪಿ, ಯುಗಪುರುಷ ಅಟಲ್ ಬಿಹಾರಿ ವಾಜಪೇಯಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ
Viral Video: ಬೈಕ್‌ ಸೀಟ್‌ನಲ್ಲಿ 57 ಲಕ್ಷ ಹವಾಲಾ ಹಣ ಸಾಗಿಸ್ತಿದ್ದ ಸ್ಮಗ್ಲರ್‌, ದಾಳಿ ಮಾಡಿದ ಪೊಲೀಸ್‌!