ವಿಷ ಪ್ರಸಾದ: ಇಬ್ಬರು ಸ್ವಾಮೀಜಿಗಳ ವಿಚಾರಣೆ

By Web Desk  |  First Published Dec 17, 2018, 9:19 AM IST

ಮಾರಮ್ಮನ ದೇಗುಲ ದುರಂತಕ್ಕೆ ಸಂಬಂಧಿಸಿ ಗೋಪುರ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ- ಕಿರಿಯ ಗುರುಸ್ವಾಮೀಜಿ, ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಮಹದೇವ ಸ್ವಾಮೀಜಿ ಅವರನ್ನು ವಿಚಾರಣೆ ಮಾಡಲಾಗಿದೆ.


ಚಾಮರಾಜನಗರ :  ಸುಳ್ವಾಡಿ ಮಾರಮ್ಮನ ದೇಗುಲ ದುರಂತಕ್ಕೆ ಸಂಬಂಧಿಸಿ ಗೋಪುರ ಪೂಜಾ ಕಾರ್ಯದ ನೇತೃತ್ವ ವಹಿಸಿದ್ದ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ- ಕಿರಿಯ ಗುರುಸ್ವಾಮೀಜಿ, ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷ ಮಹದೇವ ಸ್ವಾಮೀಜಿ ಅವರನ್ನು ವಿಚಾರಣೆ ಮಾಡಲಾಗಿದೆ.

ಸುಳ್ವಾಡಿ ಸುತ್ತಮುತ್ತಲ ಪ್ರದೇಶದಲ್ಲಿ ಸಾಲೂರು ಶ್ರೀಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನ.14ರಂದು ಸುಳ್ವಾಡಿ ಮಾರಮ್ಮನ ದೇವಸ್ಥಾನದ ಗೋಪುರ ಪೂಜಾ ಕಾರ್ಯಕ್ಕೂ ಮಲೆ ಮಹದೇಶ್ವರ ಬೆಟ್ಟದ ಹಿರಿಯ- ಕಿರಿಯ ಗುರುಸ್ವಾಮೀಜಿಗಳು ಆಗಮಿಸಿದ್ದರು. ಆದರೆ, ಶ್ರೀಗಳು ಪ್ರಸಾದ ಸೇವನೆ ಮಾಡದ ಹಿನ್ನೆಲೆಯಲ್ಲಿ ಬಚಾವಾಗಿದ್ದರು. ಇನ್ನು ಟ್ರಸ್ಟ್‌ನ ಅಧ್ಯಕ್ಷರಾಗಿರುವ ಮಹದೇವ ಸ್ವಾಮೀಜಿ ಕಾರ್ಯಕ್ರಮಕ್ಕೇ ಆಗಮಿಸಿರಲಿಲ್ಲ.

Tap to resize

Latest Videos

"

ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ ಮತ್ತು ಮಹದೇಶ್ವರಬೆಟ್ಟಇನ್ಸ್‌ಪೆಕ್ಟರ್‌ ಮಹೇಶ್‌ ಭಾನುವಾರ ಮಠಕ್ಕೆ ತೆರಳಿ ಶ್ರೀಗಳ ವಿಚಾರಣೆ ನಡೆಸಿದ್ದಾರೆ. ಇದನ್ನು ಎಸ್ಪಿ ಧರ್ಮೇಂದರ್‌ ಕುಮಾರ್‌ ಮೀನಾ ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ. ವಿಚಾರಣೆ ದೃಷ್ಟಿಯಿಂದ ಟ್ರಸ್ಟಿಚಿನ್ನಪ್ಪಿ, ವ್ಯವಸ್ಥಾಪಕ ಮಹದೇವಸ್ವಾಮಿ ಅಲಿಯಾಸ್‌ ಮಾದೇಶ್‌, ಈರಣ್ಣ ಎಂಬುವರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

2ನೇ ದಿನವೂ ತೆರೆಯದ ದೇಗುಲ:  600 ವರ್ಷಗಳ ಇತಿಹಾಸ ಹೊಂದಿರುವ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ದೇಗುಲ ದುರಂತ ನಡೆದ ಬಳಿಕ ಎರಡನೇ ದಿನವೂ ಬಂದ್‌ ಆಗಿತ್ತು, ದೇವಾಲಯದ ಆವರಣ ಬಿಕೋ ಎನ್ನುತ್ತಿತ್ತು.

ಈ ಭಾಗದ ಪ್ರಮುಖ ಆರಾಧ್ಯ ದೈವ ಇದಾಗಿದ್ದು, ಕಟ್ಟಿಕೊಂಡ ಹರಕೆಗಳು ಈಡೇರುತ್ತವೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಂಡು ಬಂದಿದ್ದರು. ರಾಜಕೀಯ ಮುಖಂಡರು ಸೇರಿ ರಾಜ್ಯದ ಹಲವಡೆಯಿಂದ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು.

ತನಿಖೆ ಪ್ರಗತಿಯಲ್ಲಿ:  ದೇಗುಲ ಮತ್ತು ದೇಗುಲದ ಸುತ್ತಮುತ್ತಲ ಪ್ರದೇಶದಲ್ಲಿ ತನಿಖಾ ತಂಡಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ದೇಗುಲದ ಸುತ್ತಮುತ್ತ ಮೊಕ್ಕಾಂ ಹೂಡಿದ್ದು ಸ್ಥಳದಲ್ಲಿ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ವರದಿ :  ದೇವರಾಜು ಕಪ್ಪಸೋಗೆ

click me!