ಪ್ರಸಾದ ಸೇವಿಸಿ ಭಕ್ತರ ಸಾವು: ಮಾರಮ್ಮ ಮುಜರಾಯಿ ಇಲಾಖೆ ವಶಕ್ಕೆ?

By Web DeskFirst Published Dec 17, 2018, 5:27 PM IST
Highlights

ಖಾಸಗಿ ವಶದಲ್ಲಿದ್ದ ಸುಳ್ವಾಡಿ ಮಾರಮ್ಮ ದೇವಸ್ಥಾನ ಶೀಘ್ರದಲ್ಲೇ ಮುಜರಾಯಿ ಇಲಾಖೆ ವಶವಾಗಲಿದೆ.  ಪ್ರಸಾದ ದುರಂತದ ಬಳಿಕ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ತೆಗೆದುಕೊಂಡಿದೆ.  

ಚಾಮರಾಜನಗರ(ಡಿ.17): ಸುಳ್ವಾಡಿ ಮಾರಮ್ಮ ದೇವಸ್ಥಾನ ಪ್ರಸಾದ ಸ್ವೀಕರಿಸಿ ಭಕ್ತರ ಸಾವು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಪ್ರಸಾದಲ್ಲಿ ಕೀಟನಾಶಕ ವಿಷ ಬೆರೆಸಿರುವುದು ಸಾಬೀತಾಗಿರೋ ಬೆನ್ನಲ್ಲೇ, ಇದೀಗ ಖಾಸಗಿ ದೇವಸ್ಥಾನವನ್ನ ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿದೆ.

"

ಇದನ್ನೂ ಓದಿ: ದೇಗುಲಗಳಲ್ಲಿ ಬೇಕಾ ಬಿಟ್ಟಿ ದಾಸೋಹಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

ದೇವಸ್ಥಾನವನ್ನು ಸರ್ಕಾರ ವಶಕ್ಕೆ ಪಡೆಯಲು ಮುಜರಾಯಿ ಇಲಾಖೆ ಜೊತೆ ಸಚಿವ ರಾಜಶೇಖರ ಪಾಟೀಲ್ ಚರ್ಚೆ ನಡೆಸಿದ್ದಾರೆ. ಜೊತೆಗೆ ಸಿಎಂ ಕುಮಾರಸ್ವಾಮಿ ಜೊತೆಗೂ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸರ್ಕಾರ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ. 

ಇದನ್ನೂ ಓದಿ: ಸುಳ್ವಾಡಿ ವಿಷ ಪ್ರಕರಣ: ಪ್ರಸಾದದಲ್ಲಿತ್ತು ಮಾರಾಣಾಂತಿಕ ಕೀಟನಾಶಕ

ದೇವಸ್ಥಾನ ಪ್ರಸಾದ ದುರಂತ ಕುರಿತಾದ ತನಿಖೆ ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜಶೇಖರ ಪಾಟೀಲ್ ಹೇಳಿದ್ದಾರೆ. ಖಾಸಗಿ ವಶದಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನವನ್ನು ಹನೂರು ತಹಶಿಲ್ದಾರ್ ಸೀಜ್ ಮಾಡಿದ್ದಾರೆ. ಚಾಮರಾಜನಗಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಿದ್ದಾರೆ. 

click me!