ಗೋವಾದ ಬೈನಾ ನಿರಾಶ್ರಿತ ಕನ್ನಡಿಗರಿಗೆ ಧೈರ್ಯ ತುಂಬಿದ ಸೂಲಿಬೆಲೆ

By Suvarna Web DeskFirst Published Sep 29, 2017, 11:03 PM IST
Highlights

ಗೋವಾದ ಬೈನಾ ಬೀಚ್​ನಲ್ಲಿ ಸುಮಾರು 40 ವರ್ಷಗಳಿಂದ ನೆಲೆಸಿದ್ದ ಕನ್ನಡಿಗರಮನೆಗಳನ್ನು ಗೋವಾ ಸರ್ಕಾರ ಏಕಾಏಕಿ ನೆಲಸಮಗೊಳಿಸಿದೆ.

ಪಣಜಿ(ಸೆ.29): ಯುವ ಬಿಗ್ರೇಡ್ ವತಿಯಿಂದ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಬೈನಾ ಕನ್ನಡ ನಿರಾಶ್ರಿತರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಜೊತೆಗೆ ಇಂದು ಬೈನಾದಲ್ಲಿ ಸಹಿ ಸಂಗ್ರಹ ಆಂದೋಲನಕ್ಕೆ  ಚಕ್ರವರ್ತಿ ಸೂಲಿಬೇಲೆ ಚಾಲನೆ ನೀಡಿದ್ದಾರೆ. ನಿರಾಶ್ರಿತರ ಸಹಿ ಸಂಗ್ರಹಿಸಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಶಾಶ್ವತ ಪುನರ್ವಸತಿಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ತೆಪ್ಪಗಿದ್ದಾರೆ ರಾಜ್ಯದ ಲಿಂಗಾಯತ-ವೀರಶೈವ ನಾಯಕರು 

ಗೋವಾದ ಬೈನಾ ಬೀಚ್​ನಲ್ಲಿ ಸುಮಾರು 40 ವರ್ಷಗಳಿಂದ ನೆಲೆಸಿದ್ದ ಕನ್ನಡಿಗರ ಮನೆಗಳನ್ನು ಗೋವಾ ಸರ್ಕಾರ ಏಕಾಏಕಿ ನೆಲಸಮಗೊಳಿಸಿದೆ. 500ಕ್ಕೂ ಹೆಚ್ಚು ಕನ್ನಡಿಗರು ಬೀದಿಗೆ ಬಿದ್ದಿದ್ದಾರೆ. ಬರೀ ಜನರು ಮಾತ್ರವಲ್ಲ. ದುರ್ಗಾದೇವಿ ದೇಗುಲ ಹಾಗೂ ಬಸವೇಶ್ವರ ದೇಗುಲವನ್ನೂ ಕೆಡವಿಹಾಕಿದ್ದಾರೆ. ಗೋವಾದಲ್ಲಿರೋ ಲಿಂಗಾಯತರು ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭದ ಜೊತೆ ಈ ನೋವನ್ನ ತೋಡಿಕೊಂಡಿದ್ದಾರೆ..

ಗೋವಾದ ಕನ್ನಡಿಗರ ಪರ ಮಿಡಿಯುತ್ತಿಲ್ಲ ರಾಜ್ಯದ ನಾಯಕರು

ದುರಂತ ಅಂದ್ರೆ ಗೋವಾದಲ್ಲಿನ ಕನ್ನಡಿಗರ ಪರ ನಮ್ಮ ರಾಜ್ಯ ನಿಲ್ಲಬೇಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕೀಯ ಮುಖಂಡರು ಮಾತಿನಲ್ಲಿ ಟೀಕೆ ಮಾಡ್ತಿದ್ದಾರೆ. ಹೊರತಾಗಿ ಗೋವಾ ಕನ್ನಡಿಗರ ರಕ್ಷಣೆ ಗೋಜಿಗೇ ಹೋಗ್ತಿಲ್ಲ. ಬೈನಾ ಬೀಚ್​ನಲ್ಲಿನ 55 ಮನೆಗಳ ತೆರವುಗೊಳಿಸುವಂತೆ ಸರ್ಕಾರ ನೋಟಿಸ್​ ನೀಡಿತ್ತು. ಆದ್ರೆ ದೇವಾಲಯವನ್ನು ಯಾವುದೇ ನೋಟಿಸ್ ನೀಡದೆ ಏಕಾಏಕಿ ಜೆಸಿಬಿ ನುಗ್ಗಿಸಿ ಕೆಡವಲಾಗಿದೆ. ಹೀಗಾಗಿ ಭಗ್ನಗೊಂಡ ಹನುಮಾನ್​ ಪ್ರತಿಮೆ, ಲಿಂಗ, ನಂದಿ, ಬಸವೇಶ್ವರ ಪ್ರತಿಮೆಗೆ ಭಕ್ತರು ಬೀದಿಯಲ್ಲಿ ಪೂಜಿಸುತ್ತಿದ್ದಾರೆ.

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ದೊಡ್ಡ ಯುದ್ಧವೇ ನಡೀತಿದೆ. ಗೋವಾದಲ್ಲಿ ಬಸವೇಶ್ವರ ದೇಗುಲ ಧ್ವಂಸಗೊಂಡರೂ ಕರ್ನಾಟಕದ ಯಾವುದೇ ರಾಜಕೀಯ, ಧಾರ್ಮಿಕ ಮುಖಂಡರಾಗಲಿ ದನಿ ಎತ್ತುತ್ತಿಲ್ಲ. ಬರೀ ಬಾಯಿ ಮಾತಿನ ಅನುಕಂಪ ತೋರಿಸ್ತಿದ್ದಾರೆ. ಇದು ಗೋವಾದ ಲಿಂಗಾಯತ - ವೀರಶೈವರನ್ನು ಕೆರಳಿಸಿದೆ.

click me!