ಕಪ್ಪು ಪಟ್ಟಿಯಿಂದ 312 ವಿದೇಶಿ ಸಿಖ್‌ ಪ್ರಜೆಗಳು ಹೊರಕ್ಕೆ: ಕೇಂದ್ರ ಸರ್ಕಾರ

By Web DeskFirst Published Sep 14, 2019, 10:36 AM IST
Highlights

1980ರ ದಶಕದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಭಾರತ ವಿರೋಧಿ ಚಟುವಟಿಕೆ| ಕಪ್ಪು ಪಟ್ಟಿಯಿಂದ 312 ವಿದೇಶಿ ಸಿಖ್‌ ಪ್ರಜೆಗಳು ಹೊರಕ್ಕೆ: ಕೇಂದ್ರ ಸರ್ಕಾರ| 

ನವದೆಹಲಿ[ಸೆ.14]: 1980ರ ದಶಕದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಭಾರತ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದ 312 ವಿದೇಶಿ ಸಿಖ್‌ ಪ್ರಜೆಗಳ ಹೆಸರನ್ನು ಕಪ್ಪು ಪಟ್ಟಿಯಿಂದ ತೆಗೆಯಲಾಗಿದೆ.

ಈ ಬಗ್ಗೆ ಶುಕ್ರವಾರ ಕೇಂದ್ರ ಗೃಹ ಇಲಾಖೆ ಅಧಿಕೃತ ಮಾಹಿತಿ ನೀಡಿದ್ದು, ಕೇಂದ್ರದ ವಿವಿಧ ಭದ್ರತಾ ಏಜೆನ್ಸಿಗಳು ನಡೆಸಿದ ಕಪ್ಪು ಪಟ್ಟಿಪರಿಶೀಲನೆಯಲ್ಲಿ 314 ವಿದೇಶಿ ಸಿಖ್‌ ಪ್ರಜೆಗಳ ಪೈಕಿ 312 ಮಂದಿ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಇನ್ನು ಮುಂದೆ ಭಾರತಕ್ಕೆ ಭೇಟಿ ನೀಡಲು ಅವರಿಗೆ ವೀಸಾ ದೊರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1980ರಲ್ಲಿ ಹಲವು ಮಂದಿ ಭಾರತೀಯ ಹಾಗೂ ವಿದೇಶಿ ಸಿಖ್‌ ಪ್ರಜೆಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೆಲ ಸಿಖ್ಖರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನಗೈದು ಬೇರೆ ಬೇರೆ ದೇಶಗಳಲ್ಲಿ ವಾಸವಾಗಿದ್ದರು. ಆಯಾ ದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಂಥವರನ್ನು ಪತ್ತೆ ಹಚ್ಚಿ ಕಪ್ಪು ಪಟ್ಟಿಗೆ ಸೇರಿಸಿತ್ತು. ಅಲ್ಲದೇ ಅವರಿಗೆ ಭಾರತ ಪ್ರವೇಶವನ್ನೂ ನಿಷೇಧಿಸಲಾಗಿತ್ತು.

click me!