ಜಾಕೆಟ್‌ ಜಾದೂ: ಭಾರತದ ಮುಡಿಗೆ ಹೊಸ ಹಿರಿಮೆ!

By Web DeskFirst Published Sep 14, 2019, 10:28 AM IST
Highlights

100 ದೇಶಕ್ಕೆ ಭಾರತದ ಬುಲೆಟ್‌ ಪ್ರೂಫ್ ಜಾಕೆಟ್‌| ಅಮೆರಿಕ, ಬ್ರಿಟನ್‌, ಜರ್ಮನಿ ಬಳಿಕ ಅಂತಾರಾಷ್ಟ್ರೀಯ ಗುಣಮಟ್ಟದ ಬುಲೆಟ್‌ ಪ್ರೂಫ್‌ ಜಾಕೆಟ್‌ ರಫ್ತು

ನವದೆಹಲಿ[ಸೆ.14]: ಯುರೋಪಿಯನ್‌ ರಾಷ್ಟ್ರಗಳು ಸೇರಿದಂತೆ ಪ್ರಪಂಚದ 100 ದೇಶಗಳಿಗೆ ಭಾರತದಲ್ಲಿ ತಯಾರಾದ ಗುಂಡು ನಿರೋಧಕ ಜಾಕೆಟ್‌ಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಭಾರತೀಯ ಗುಣಮಟ್ಟಸಂಸ್ಥೆ(ಬಿಐಎಸ್‌) ತಿಳಿಸಿದೆ.

ಅಮೆರಿಕ, ಬ್ರಿಟನ್‌, ಜರ್ಮನಿ ಬಳಿಕ ಅಂತಾರಾಷ್ಟ್ರೀಯ ಗುಣಮಟ್ಟದ ಬುಲೆಟ್‌ ಪ್ರೂಫ್‌ ಜಾಕೆಟ್‌ ರಫ್ತು ಮಾಡುವ ನಾಲ್ಕನೇ ದೇಶ ಭಾರತವಾಗಿದೆ. ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ ಸ್ಟ್ಯಾಂಡರ್ಡ್‌ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳನ್ನು 2018 ರಲ್ಲಿ ಪರಿಚಯಿಸಲಾಯಿತು. ಇದನ್ನೀಗ ಎಲ್ಲರೂ ಬಳಸಿಕೊಳ್ಳುತ್ತಿದ್ದಾರೆ.

ಭಾರತದ ಸೇನೆಗೆ ಮಾತ್ರವಲ್ಲದೇ, 100 ದೇಶಗಳಿಗೂ ಸಂಸ್ಥೆ ಗುಂಡು ನಿರೋಧಕ ಜಾಕೆಟ್‌ಗಳನ್ನು ತಯಾರಿಸಿ ಕೊಡುತ್ತಿದೆ. ಎಕೆ-47 ಗನ್‌ನಿಂದ 700 ಮೀಟರ್‌ ಅಂತರದಿಂದ ಗುಂಡು ಹಾರಿಸಿದರೂ ಜೀವರಕ್ಷಣೆ ಮಾಡುವ ಸಾಮರ್ಥ್ಯವುಳ್ಳ ಗುಂಡು ನಿರೋಧಕ ಶಕ್ತಿ ಈ ಜಾಕೆಟ್‌ಗಳಿಗೆ ಇದೆ ಎಂದು ಸಂಸ್ಥೆ ತಿಳಿಸಿದೆ.

click me!