ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಸಹಾಯವಾಣಿ

Published : Dec 03, 2017, 06:10 PM ISTUpdated : Apr 11, 2018, 12:57 PM IST
ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಸಹಾಯವಾಣಿ

ಸಾರಾಂಶ

ಧೂಮಪಾನವನ್ನು ಬಿಡಲು ಇಚ್ಛಿಸುತ್ತಿದ್ದರೂ ಕೂಡ ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವವರಿಗಾಗಿ  ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಟೋಲ್ – ಫ್ರಿ ಸಂಖ್ಯೆಯೊಂದನ್ನು ಮುದ್ರಿಸಲು ತೀರ್ಮಾನಿಸಿದೆ.

ನವದೆಹಲಿ(ಡಿ.3): ವಿನೂತನ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಮತ್ತೊಂದು ಕಾರ್ಯಕ್ಕೆ ಯೋಜನೆ ರೂಪಿಸುತ್ತಿದೆ. ಇದೀಗ ಕೇಂದ್ರ ಸರ್ಕಾರವೂ ಧೂಮಪಾನಿಗಳ ಪರವಾಗಿ ಹೊಸದಾಗಿ ಕೆಲಸವೊಂದನ್ನು ಕೈಗೆತ್ತಿಕೊಳ್ಳುತ್ತಿದೆ.

ಧೂಮಪಾನ ಪರ ಎಂದರೆ ಅವರಿಗೆ ಬೆಂಬಲ ನೀಡುವುದಲ್ಲ. ಬದಲಿಗೆ ಧೂಮಪಾನವನ್ನು ಬಿಡಲು ಇಚ್ಛಿಸುತ್ತಿದ್ದರೂ ಕೂಡ ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವವರಿಗಾಗಿ  ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಟೋಲ್ – ಫ್ರಿ ಸಂಖ್ಯೆಯೊಂದನ್ನು ಮುದ್ರಿಸಲು ತೀರ್ಮಾನಿಸಿದೆ.

 ಸಂಖ್ಯೆಗೆ ಕರೆ ಮಾಡಿದಲ್ಲಿ  ಯಾವುದೇ ರೀತಿಯಾದ ದರ ಕಡಿತವಿಲ್ಲದೇ ಉಚಿತವಾಗಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬಹುದಾಗಿದೆ. 1800 – 227787 ಸಂಖ್ಯೆಗೆ  ಕರೆ ಮಾಡಿದಾಗ ತಂಬಾಕು ಉತ್ಪನ್ನಗಳಿಂದಾಗುವ ಸಮಸ್ಯೆಗಳ ಬಗ್ಗೆ ತಿಳಿಸಿ ಅದನ್ನು ತ್ಯಜಿಸಲು ಸಲಹೆ ನೀಡಲಾಗುತ್ತದೆ.

2015ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ತಂಬಾಕು ಉತ್ಪನ್ನಗಳ ಪಾಕೆಟ್ ಮೇಲೆ ಶೇ.85ರಚ್ಟು ಭಾಗ ಎಚ್ಚರಿಕೆ ಸಂದೇಶಗಳನ್ನು 2016ರ ಏಪ್ರಿಲ್ 1 ರಿಂದ ಮುದ್ರಣ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಇದೀಗ ಈ ಸಾಲಿಗೆ ಸಹಾಯವಾಣಿ ಸಂಖ್ಯೆಯೂ ಕೂಡ ಸೇರ್ಪಡೆಯಾಗುಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು