ಹೆಸರಿಗೆ ಜ್ವರದ ಚಿಕಿತ್ಸೆ, ಮಾಡಿದ್ದು ಸಂತಾನಹರಣ ಚಿಕಿತ್ಸೆ!

By Suvarna Web DeskFirst Published Dec 3, 2017, 5:54 PM IST
Highlights

ಜ್ವರ ಬಂದವರಿಗೆ ಚಿಕಿತ್ಸೆ ನೀಡುವಾಗ ವಂಚಿಸಿ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ (ಡಿ.03): ಜ್ವರ ಬಂದವರಿಗೆ ಚಿಕಿತ್ಸೆ ನೀಡುವಾಗ ವಂಚಿಸಿ, ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರಪ್ಪನಹಳ್ಳಿ ನಿವಾಸಿಗಳಾದ ನರಸಿಂಹಮೂರ್ತಿ ಮತ್ತು ಬ್ಯಾಟಪ್ಪ ಅವರಿಗೆ ಜ್ವರ ಬಂದಿದ್ದು, ಆಶಾ ಕಾರ್ಯಕರ್ತೆ ಪದ್ಮಾವತಿ ಎಂಬುವರು ಇವರನ್ನು ವಂಚಿಸಿ, ವೈದ್ಯರ ಬಳಿ ಕರೆದೊಯ್ದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಆಶಾ ಕಾರ್ಯಕರ್ತೆ ಪದ್ಮಾವತಿ ವಿರುದ್ಧ ನರಸಿಂಹಮೂರ್ತಿ ಅವರ ಪತ್ನಿ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಜ್ವರ ಬಂದಿದ್ದ ನರಸಿಂಹಮೂರ್ತಿ ಮತ್ತು ಬ್ಯಾಟಪ್ಪ ಅವರಿಗೆ ಆಶಾ ಕಾರ್ಯಕರ್ತೆ ವಂಚಿಸಿದ್ದಾಗಿ ಆರೋಪಿಸಲಾಗಿದೆ. ಆದ್ರೆ ಆರೋಪವನ್ನು  ನಿರಾಕರಿಸಿರುವ ಡಿಹೆಚ್ಓ ರವಿಶಂಕರ್, ಅವರ ಒಪ್ಪಿಗೆ ಪಡೆದು ನಾವು ಚಿಕಿತ್ಸೆ ಕೊಟ್ಟಿದ್ದೇವೆ. ಸುಮ್ಮನೇ ಈಗ  ಅಂಗನವಾಡಿ ಕಾರ್ಯಕರ್ತೆ ಗಂಡ ಆರೋಪ ಮಾಡುತ್ತಿದ್ದಾರೆ ಅಂತ ಹೇಳಿದ್ದಾರೆ.

click me!