
ಬೆಂಗಳೂರು (ಏ.06): ಟೆಲಿಕಾಂ ಸಂಸ್ಥೆಗಳ ನಿಯಂತ್ರಣಕ್ಕೆ ರೂಪಿಸಿರುವ ಕಾಯ್ದೆಯಂತೆ ಶೀಘ್ರದಲ್ಲಿಯೇ ಓವರ್-ದ-ಟಾಪ್ ಸೇವೆ ನೀಡುತ್ತಿರುವ ಫೇಸ್‌ಬುಕ್, ವಾಟ್ಸಪ್, ಸ್ಕೈಪ್, ವಿಚಾಟ್ ಮತ್ತು ಗೂಗಲ್ ಟಾಕ್ ಮುಂತಾದ ಆ್ಯಪ್‌ಗಳ ನಿಯಂತ್ರಣಕ್ಕೂ ಕಾಯಿದೆ ರೂಪಿಸುವುದಾಗಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಒಟಿಟಿ ಸೇವೆ ನೀಡುತ್ತಿರುವ ಆ್ಯಪ್‌ಗಳು ಟೆಲಿಕಾಂ ನೆಟ್ವರ್ಕ್ ಬಳಸಿಕೊಂಡೆ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ, ಅವುಗಳ ನಿಯಂತ್ರಣಕ್ಕೆ ಯಾವುದೇ ಅಧಿಕೃತ ಕಾನೂನು ರೂಪಿಸಿಲ್ಲ ಎಂದು ಟೆಲಿಕಾಂ ಸಂಸ್ಥೆಗಳು ವಾದಿಸುತ್ತಿವೆ. ಹೀಗಾಗಿ ಇಂಥ ಆ್ಯಪ್‌ಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ಕೇಂದ್ರ ಸರಕಾರ ಮುಂದಾಗಿದೆ. ವಾಟ್ಸಪ್ ಗೌಪ್ಯವಾಗಿಡಬೇಕಾದ ಬಳಕೆದಾರರ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳಲು ಫೇಸ್‌ಬುಕ್‌ಗೆ ಒದಗಿಸಲು ಮುಂದಾಗಿರುವುದು ಕಾನೂನು ಬಾಹಿರ ಎಂದು ಕರ್ಮಣ್ಯ ಸಿಂಗ್ ಸರೀನ್ ಹಾಗೂ ಶ್ರೇಯಾ ಸೇಥಿ ಅವರು ಸರ್ವೋಚ್ಚ ನ್ಯಾಯಾಲಯದ ಮೇಟ್ಟಿಲೇರಿದ್ದರು. ಇದನ್ನು ಪ್ರಶ್ನಿಸಿ ವಾಟ್ಸಪ್ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಈ ಮೇಲ್ಮನವಿ ಆಧಾರದಲ್ಲಿ ಸುಪ್ರೀಂ ಕೋರ್ಟಿನ ಸೂಚನೆಯಂತೆ ಕೇಂದ್ರವು ಈ ಮಾಹಿತಿಯನ್ನು ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಸುಪ್ರೀಂಕೋರ್ಟಿನಲ್ಲಿ ಈ ಕುರಿತು ಏಪ್ರಿಲ್ 18ರಂದು ಮುಂದಿನ ವಿಚಾರಣೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.