ಪೆಟ್ರೋಲ್‌, ಡೀಸೆಲ್‌ ಬೆಲೆ 5 ರು. ಇಳಿಸಲು ಕೇಂದ್ರ ಸರ್ಕಾರದಿಂದ ಕಸರತ್ತು?

Published : Jun 01, 2018, 10:22 AM IST
ಪೆಟ್ರೋಲ್‌, ಡೀಸೆಲ್‌ ಬೆಲೆ  5 ರು. ಇಳಿಸಲು ಕೇಂದ್ರ  ಸರ್ಕಾರದಿಂದ ಕಸರತ್ತು?

ಸಾರಾಂಶ

ಪೆಟ್ರೋಲ್‌, ಡೀಸೆಲ್‌ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ತೀವ್ರ ಕಳವಳಗೊಂಡಿರುವ ಕೇಂದ್ರ ಸರ್ಕಾರ, ಅವೆರಡೂ ಇಂಧನಗಳ ಬೆಲೆಯನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 

ನವದೆಹಲಿ (ಜೂ. 01):  ಪೆಟ್ರೋಲ್‌, ಡೀಸೆಲ್‌ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ತೀವ್ರ ಕಳವಳಗೊಂಡಿರುವ ಕೇಂದ್ರ ಸರ್ಕಾರ, ಅವೆರಡೂ ಇಂಧನಗಳ ಬೆಲೆಯನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸಲಾಗುತ್ತಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಡಿತಗೊಳಿಸುವಂತೆ ರಾಜ್ಯ ಸರ್ಕಾರಗಳ ಮನವೊಲಿಸುವಲ್ಲಿ ಯಶಸ್ವಿಯಾದರೆ, ತೈಲೋತ್ಪನ್ನ ಕಂಪನಿಗಳ ಮಾರಾಟ ಕಮಿಷನ್‌ ಇಳಿಕೆ ಮಾಡಿಸುವಲ್ಲಿ ಸಫಲವಾದರೆ, ಅಬಕಾರಿ ಸುಂಕವನ್ನು ಕೊಂಚ ಇಳಿಕೆ ಮಾಡಿ ಲೀಟರ್‌ ಪೆಟ್ರೋಲ್‌- ಡೀಸೆಲ್‌ ಬೆಲೆಯನ್ನು 4ರಿಂದ 5 ರು.ನಷ್ಟುಇಳಿಕೆ ಮಾಡುವ ಆಸೆ ಕೇಂದ್ರ ಸರ್ಕಾರಕ್ಕೆ ಇದೆ. ಆದರೆ ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರಗಳು ಒಪ್ಪುತ್ತವೆಯೇ ಎಂಬುದರ ಮೇಲೆ ಇದರ ಭವಿಷ್ಯ ಅಡಗಿದೆ.

ತೈಲ ಬೆಲೆ ಏರಿಕೆ ಕೇಂದ್ರ ಸರ್ಕಾರಕ್ಕೆ ತೀವ್ರ ಚಿಂತೆಯ ವಿಷಯವಾಗಿದೆ. ರಾಜ್ಯಗಳು ಹಾಗೂ ತೈಲ ಕಂಪನಿಗಳು ತಮ್ಮ ಪಾತ್ರ ನಿರ್ವಹಿಸಿದರೆ ಶೀಘ್ರದಲ್ಲೇ ಬೆಲೆ ಇಳಿಕೆಯಾಗಬಹುದು. ಏಕೆಂದರೆ, ಕೇಂದ್ರ ಸರ್ಕಾರವೊಂದೇ ಹೊರೆ ಹೊರಲು ಆಗದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!
Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌