
ನವದೆಹಲಿ(ಜೂ.29): ಕರ್ನಾಟಕದ ಹಲವು ಭಾಗಗಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹಿಂಗಾರು ಬೆಳೆ ನಷ್ಟದ ಮಾತೇ ಕೇಳಂಗಿಲ್ಲ. ಹಿಂಗಾರಲ್ಲಿ ಆಗಿರೋ ನಷ್ಟದ ಪರಿಹಾರಕ್ಕಾಗಿ 795. 54 ಕೋಟಿ ಹಣವನ್ನ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ನವದೆಹಲಿಯಲ್ಲಿ ನಡೆದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಚಿವರ ಸಮಿತಿ ಸಭೇಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಹಿಂಗಾರು ಬೆಳೆಗೆ 3320 ಕೋಟಿ ರೂಪಾಯಿ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರ ಕಳೆದ 4 ತಿಂಗಳಿನಿಂದ ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿತ್ತು.. ಈ ಸಂಬಂಧ ನಾರ್ತ್ ಬ್ಲಾಕ್ನಲ್ಲಿ ಸಭೆ ಸೇರಿದ್ದ ಉನ್ನತ ಮಟ್ಟದ ಸಚಿವರ ಸಮಿತಿ, ಕರ್ನಾಟಕಕ್ಕೆ ಅಂದಾಜು 800 ಕೋಟಿ ಹಣ ಮಂಜೂರು ಮಾಡುವ ತೀರ್ಮಾನ ಕೈಗೊಂಡಿದೆ. ರಾಜ್ಯ ಸರ್ಕಾರ ಕೇಳಿದ್ದ 25 ಪ್ರತಿಶತದಷ್ಟು ಹಣವನ್ನು ಕೇಂದ್ರ ಮಂಜೂರು ಮಾಡಿದೆ.
ಇವತ್ತಿನ ಸಭೆಗೂ ಮುನ್ನ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನ ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಭೇಟಿಯಾಗಿದ್ದರು. ಈ ವೇಳೆ ಸರ್ಕಾರ ಕೇವಲ ಹಣವನ್ನ ಮಂಜೂರು ಮಾಡಿದರೆ ಸಾಲದು. ಈ ಕೂಡಲೇ ಬಿಡುಗಡೆ ಮಾಡಬೇಕು ಅಂತ ರಾಜ್ಯದ ಸಂಸದರು ಒತ್ತಡ ಹೇರಬೇಕು ಅಂತ ಮನವಿ ಮಾಡಿದ್ದರು.
ಒಟ್ಟಾರೆ ಮುಂಗಾರು ಹಾನಿಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ 4702 ಕೋಟಿ ಪರಿಹಾರ ಕೇಳಿತ್ತು. ಆದ್ರೆ ಕೇಂದ್ರ 1782. 44 ಕೋಟಿ ಬಿಡುಗಡೆ ಮಾಡಿತ್ತು. ಈಗ ಹಿಂಗಾರು ಪರಿಹಾರಕ್ಕಾಗಿ ರಾಜ್ಯ ಕೇಳಿದ 3320 ಕೋಟಿ ಹಣದಲ್ಲಿ ಕೇವಲ 795. 54 ಕೋಟಿ ಬಿಡುಗಡೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.