ಮತಪಟ್ಟಿಯಲ್ಲಿ ಹೆಸರು ಸೇರಿಸಲು ಜು.1 ರಿಂದ ವಿಶೇಷಾಭಿಯಾನ

By Suvarna Web DeskFirst Published Jun 29, 2017, 10:05 PM IST
Highlights

ನವದೆಹಲಿ: ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತಾಗಲು ಭಾರತೀಯ ಚುನಾವಣಾ ಆಯೋಗವು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ‘ಯಾವೊಬ್ಬ ಮತದಾರನೂ ಪಟ್ಟಿಯಿಂದ ಬಿಟ್ಟು ಹೋಗಬಾರದು' ಎಂಬ ಧ್ಯೇಯದೊಂದಿಗೆ ಆಯೋಗವು ಜುಲೈ 1ರಿಂದ 31ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಿದೆ.

ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹತೆ ಹೊಂದಿದ ಯುವಜನತೆಯನ್ನು ಗಮನದಲ್ಲಿಟ್ಟು ಆಯೋಗವು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಸುಮಾರು 180 ಮಿಲಿಯನ್ ಭಾರತೀಯರು ಫೇಸ್’ಬುಕ್ ಖಾತೆ ಹೊಂದಿರುವ ಹಿನ್ನೆಲೆಯಲ್ಲಿ, ಫೇಸ್ ಬುಕ್ ಮೂಲಕ ನೋಂದಾಯಿಸುವ ಸೌಲಭ್ಯವನ್ನು ಆಯೋಗವು ಆರಂಭಿಸಲಿದೆ. ಅಲ್ಲದೇ ಪ್ರತಿದಿನವೂ ಫೇಸ್ ಬುಕ್’ನಲ್ಲಿ ನೋಟಿಫಿಕೇಶನ್ ಕಳುಹಿಸುವ ಮೂಲಕ ನೆನಪಿಸುವ ಕೆಲಸವನ್ನು ಮಾಡಲಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಸೇರಿದಂತೆ ಸುಮಾರು 13 ಭಾರತೀಯ ಭಾಷೆಗಳಲ್ಲಿ ಈ ನೋಟಿಫೀಕೇಶನ್ ಕಳುಹಿಸುವ ವ್ಯವಸ್ಥೆಯನ್ನು ಆಯೋಗವು ಮಾಡಿದೆ. ಈ ರೀತಿ ಫೇಸ್ ಬುಕ್ ಮೂಲಕ ಮತದಾರರ ನೋಂದಣಿಯನ್ನು ನೆನಪಿಸುವ ವ್ಯವಸ್ಥೆ ಇದೇ ಮೊದಲ ಬಾರಿಗೆ ದೇಶದಲ್ಲಿ ನಡೆಯಲಿದೆ.

click me!