ನೀವು 1962ರ ಯುದ್ಧದಿಂದ ಪಾಠ ಕಲಿತಂತಿಲ್ಲ : ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ

Published : Jun 29, 2017, 09:40 PM ISTUpdated : Apr 11, 2018, 12:47 PM IST
ನೀವು 1962ರ ಯುದ್ಧದಿಂದ ಪಾಠ ಕಲಿತಂತಿಲ್ಲ  : ಭಾರತಕ್ಕೆ ಎಚ್ಚರಿಕೆ ನೀಡಿದ ಚೀನಾ

ಸಾರಾಂಶ

ಭಾರತದ ಇಂತಹ ನಡವಳಿಕೆಗಳು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಭಾರತೀಯ ಸೇನೆಯ ಮುಖ್ಯಸ್ಥರು  ಇತಿಹಾಸದಿಂದ ಪಾಠ ಕಲಿತಿರುವ ಬಗ್ಗೆ ಅರಿತುಕೊಂಡು ಈ ರೀತಿ ಅರಚುವುದನ್ನು ನಿಲ್ಲಿಸಬೇಕು'

ಬೀಜಿಂಗ್(ಜೂ.29): ನೀವು ಇತಿಹಾಸದಿಂದ ಪಾಠ ಕಲಿತಂತಿಲ್ಲ,1962ರಲ್ಲಿ ಸೋತದ್ದನ್ನು ನೆನಪು ಮಾಡಿಕೊಂಡು ಯುದ್ಧದ ಬಗ್ಗೆ ಕೂಗಾಡುವುದನ್ನು ಬಿಡಬೇಕು ಎಂದು ಚೀನಾ ಬಾರತಕ್ಕೆ ಎಚ್ಚರಿಕೆ ನೀಡಿದೆ.

ಚೀನಾ ಹಾಗೂ ಪಾಕಿಸ್ತಾನದ ಆಂತರಿಕ ಭದ್ರತಾ ವಿಷಯಗಳಿಗೆ ಸಂಬಂಧಪಟ್ಟಂತೆ ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನೀಡಿರುವ ಹೇಳಿಕೆಯ ಬಗ್ಗೆ  ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ವಕ್ತಾರ ವೂ ಕಿಯಾನ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಇಂತಹ ನಡವಳಿಕೆಗಳು ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದೆ. ಭಾರತೀಯ ಸೇನೆಯ ಮುಖ್ಯಸ್ಥರು  ಇತಿಹಾಸದಿಂದ ಪಾಠ ಕಲಿತಿರುವ ಬಗ್ಗೆ ಅರಿತುಕೊಂಡು ಈ ರೀತಿ ಅರಚುವುದನ್ನು ನಿಲ್ಲಿಸಬೇಕು' ಎಂದು ಮಾಸಿಕ ರಕ್ಷಣಾ ಮಂತ್ರಾಲಯದ ಸಭೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸೇನೆ ನಮ್ಮ ಸ್ವಂತ ನೆಲದಲ್ಲಿ ರಸ್ತೆ ನಿರ್ಮಿಸುತ್ತಿದೆ ವಿನಃ ಭೂತಾನ್'ಗೆ ಸೇರಿದ ಪ್ರದೇಶದಲ್ಲಿ ಕೆಲಸಮಾಡುತ್ತಿಲ್ಲ.ನಮ್ಮ ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಕಾಲಿರಿಸಿದ್ದಕ್ಕೆ ತಕ್ಕ ಪ್ರತ್ಯತ್ತರ ನೀಡಿದ್ದೇವೆ. ಅಲ್ಲದೆ ನಾವು ಯಾವುದೇ ದೇಶದ ವಿರುದ್ಧ ಅನ್ಯತಾ ದಾಳಿ ಮಾಡುವುದಿಲ್ಲ'. ಭೂತಾನ್ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವು ಬಗ್ಗೆ ವೂ ಕಿಯಾನ್ ಅಲ್ಲಗಳೆದಿದ್ದಾರೆ. ಅಲ್ಲದೆ ನಮಗೆ ಸೇರಿದ ಪ್ರದೇಶದಿಂದ ಭಾರತದ ಪಡೆಗಳು ವಾಪಸಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ' ಭಾರತೀಯ ಸೇನೆಗೆ ಆಗ್ರಹಿಸಿದ್ದಾರೆ.  

ದೋಂಗ್'ಲಾಮ್ ಪ್ರದೇಶ ಅತ್ಯಂತ ಕಿರಿದಾದ ಸ್ಥಳದಲ್ಲಿದ್ದು, ಭಾರತ,ಚೀನಾ ಹಾಗೂ ಭೂತಾನ್'ನ ಮೂರು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.ಇದು ಭೂತಾನ್ ದೇಶಕ್ಕೆ ಸೇರಿದರಾದರೂ  ಚೀನಾದ ನಿಯಂತ್ರಣದಲ್ಲಿದೆ.ಎರಡೂ ದೇಶಗಳ ನಡುವೆ ಇಲ್ಲಿಯವೆರೆಗೂ 24 ಸುತ್ತಿನ ಮಾತುಕತೆಗಳು ನಡೆದರೂ ಗಡಿ ವಿಚಾರ ತಹಬದಿಗೆ ಬಂದಿಲ್ಲ.  

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ