
ನವದೆಹಲಿ[ಆ.04]: ಲಕ್ಷಾಂತರ ಕೋಟಿ ರೂ. ವಂಚಿಸಿ ದೇಶದಿಂದ ಪರಾರಿಯಾದ 28 ಆರ್ಥಿಕ ಅಪರಾಧಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಕೇಂದ್ರೀಯ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ 6 ಮಹಿಳೆಯರು ಒಳಗೊಂಡ 28 ಅಪರಾಧಿಗಳ ವಿರುದ್ಧ 2015 ರಲ್ಲೇ ಕ್ರಿಮಿನಲ್ ಪ್ರಕರಣ ಒಳಗೊಂಡಂತೆ ಆರ್ಥಿಕ ಅಪರಾಧದ ಪ್ರಕರಣಗಳನ್ನು ದಾಖಲಿಸಿದೆ.
ಕೇಂದ್ರ ರಾಜ್ಯ ವಿದೇಶಾಂಗ ಸಚಿವ ಜನರಲ್ ವಿ.ಕೆ.ಸಿಂಗ್[ನಿವೃತ್ತ] ಇವರ ಹೆಸರುಗಳನ್ನು ಜು.25, 2018ರಂದು ಲೋಕಸಭೆಗೆ ಸಲ್ಲಿಸಿದರು. ಸಂಸದ ಪ್ರೊ. ಕೆ.ವಿ.ಥಾಮಸ್ ಅವರ ಪ್ರಶ್ನೆಗೆ ಉತ್ತರಿಸಿದ ವಿ.ಕೆ.ಸಿಂಗ್ ತಲೆ ಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತರಲು ಲುಕ್ ಔಟ್ ನೋಟಿಸ್, ರೆಡ್ ಕಾರ್ನ್'ರ್ ನೋಟಿಸ್ ಸೇರಿದಂತೆ ಹಲವು ಕ್ರಮಗಳನ್ನು ಜರುಗಿಸಲಾಗಿದೆ ಎಂದು ತಿಳಿಸಿದರು.
ಅಪರಾಧಿಗಳನ್ನು ಭಾರತಕ್ಕೆ ಒಪ್ಪಿಸಲು ಸಲುವಾಗಿಯೇ ಭಾರತವು ಅಮೆರಿಕಾ,ಯುಎಇ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಹಾಂಕಾಂಗ್ ಸೇರಿದಂತೆ 48 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಆರ್ಥಿಕ ಸುಸ್ತಿದಾರರ ಪಟ್ಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.