ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಕ್ತು ಗುಡ್ ನ್ಯೂಸ್

By Web DeskFirst Published Aug 4, 2018, 3:37 PM IST
Highlights

ಕೇಂದ್ರ ಸರ್ಕಾರ ರಾಜ್ಯಕ್ಕೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಮಾಹಿತಿ ಪ್ರಕಾರ, ಮಾನವ ಸಂಪನ್ಮೂಲ ಸಚಿವಾಲಯವು ಕೆಎಸ್‌ಒಯುಗೆ ಒಪ್ಪಿಗೆ ಸೂ ಚಿಸಿರುವ ಹಿನ್ನೆಲೆಯಲ್ಲಿ ಇನ್ನು ಯುಜಿಸಿಯು ಒಪ್ಪಿಗೆಯ ಆದೇಶ ಹೊರಡಿಸುವುದು ಖಚಿತವಾಗಿದೆ. 

ಬೆಂಗಳೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ದ ಮರು ಆರಂಭಕ್ಕೆ ಮಾನವ ಸಂಪನ್ಮೂಲ ಸಚಿವಾಲಯ ಹಸಿರು ನಿಶಾನೆ ತೋರಿದ್ದು, ಇದೇ ಶೈಕ್ಷಣಿಕ ವರ್ಷ(2018 )ದಿಂದ ಪ್ರಾರಂಭಿಸಲು ಒಪ್ಪಿದೆ. ಇದೀಗ ಕಡತವು ವಿಶ್ವ ವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಕ್ಕೆ ಹೋಗಿದ್ದು ಅಲ್ಲಿ ಅಂಗೀಕೃತವಾದೊಡನೆ ಕೆಎಸ್ ಒಯುಗೆ ಮರುಜೀವ ಬರಲಿದೆ. 

ಮಾಹಿತಿ ಪ್ರಕಾರ, ಮಾನವ ಸಂಪನ್ಮೂಲ ಸಚಿವಾಲಯವು ಕೆಎಸ್‌ಒಯುಗೆ ಒಪ್ಪಿಗೆ ಸೂ ಚಿಸಿರುವ ಹಿನ್ನೆಲೆಯಲ್ಲಿ ಇನ್ನು ಯುಜಿಸಿಯು ಒಪ್ಪಿಗೆಯ ಆದೇಶ ಹೊರಡಿಸುವುದು ಖಚಿತ. 2018 ರ ಶೈಕ್ಷಣಿಕ ಸಾಲಿಗೆ ಆಗಸ್ಟ್‌ನಿಂದ ಕೆಎಸ್  ಒಯುಗೆ ವಿದ್ಯಾರ್ಥಿಗಳ ನೋಂದಣಿಗೆ ಯುಜಿಸಿ ಅವಕಾಶ ನೀಡಲಿದೆ. ಯುಜಿಸಿಯು ಆಗಸ್ಟ್ 10 ರೊಳಗೆ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇದರಿಂದ 2013 - 14,  2014 - 15ರ ಬ್ಯಾಚ್‌ಗಳ ಶೈಕ್ಷಣಿಕ ಅನರ್ಹತೆ ತೆರವುಗೊಂಡಿಲ್ಲವಾಗಿದ್ದರಿಂದ ಸುಮಾರು 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿಯೇ ಇದೆ. ತಾಂತ್ರಿಕ ವಿಷಯಗಳನ್ನು ಆರಂಭಿಸಿದ್ದು ಮತ್ತು ಕರ್ನಾಟಕದ ಹೊರಗಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ ಕಾರಣಕ್ಕಾಗಿ ಯುಜಿಸಿಯು 2015 ರಲ್ಲಿ ಮುಕ್ತ ವಿವಿಗೆ ನೀಡಿದ್ದ ಮಾನ್ಯತೆಯನ್ನು ರದ್ದು ಪಡಿಸಿತ್ತು. ಆದರೆ ಬಳಿಕ ತಾವು ತಾಂತ್ರಿಕ ವಿಷಯಕ್ಕೆ ಅವಕಾಶ ನೀಡುವುದಿಲ್ಲ ಮತ್ತು ರಾಜ್ಯದೊಳಗೆ ಮಾತ್ರ ವಿದ್ಯಾರ್ಥಿಗಳ ಪ್ರವೇಶಾತಿ ನೀಡುತ್ತೇವೆ ಎಂದು ಕೆಎಸ್‌ಒಯು ಯುಜಿಸಿಗೆ ತಿಳಿಸಿತ್ತು.

ಹಾಗೆಯೇ ಯುಜಿಸಿಯ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನೇಕ ಸುತ್ತಿನಲ್ಲಿ ಮಾಹಿತಿ ಸಂಗ್ರಹ, ದಾಖಲೆ ಪರಿಶೀಲನೆ, ಸಭೆಗಳನ್ನು ನಡೆಸಿದ ಯುಜಿಸಿ ಅಂತಿಮವಾಗಿ ಕೆಎಸ್ ಒಯುಗೆ ಅನುಮತಿ ನೀಡುವ ತೀರ್ಮಾನಕ್ಕೆ ಬಂದಿತ್ತು. ತದನಂತರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಈ ಬಗೆಗಿನ ಕಡತ ಸಲ್ಲಿಸಿದ್ದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಕಡತಕ್ಕೆ ಸಹಿ ಹಾಕಿದ್ದಾರೆ. 

ಮುಕ್ತ ವಿವಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಸುಮಾರು 40,000 ವಿದ್ಯಾರ್ಥಿಗಳು ನೋಂದಣಿ ಆಗುತ್ತಿದ್ದರು. ಇದೀಗ ಕೆಎಸ್‌ಒಯುಗೆ ಮರು ಮಾನ್ಯತೆ ಸಿಕ್ಕರೆ ಮುಕ್ತ ವಿವಿಯಲ್ಲಿ ಓದುವ ಬಯಕೆ ಹೊಂದಿರುವ ರಾಜ್ಯದಲ್ಲಿನ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ.

ಮುಕ್ತ ವಿವಿಗೆ ಅನುಮತಿ ನೀಡಬೇಕು ಎಂದು ಅನೇಕ ದಿನಗಳಿಂದ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದ್ದೇವು. ಪ್ರಕಾಶ್ ಜಾವಡೇಕರ್ ಅವರು ನಮ್ಮ ಮನವಿಗೆ ಸ್ಪಂದಿಸಿ ಮುಕ್ತ ವಿವಿಗೆ ಅನುಮತಿ ನೀಡಿರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ರಾಜ್ಯದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಕೆಎಸ್‌ಒಯು ಸಲ್ಲಿಸಿರುವ ಎಲ್ಲ ಸಂಯೋಜನೆಗಳಿಗೆ ಅನುಮತಿ ಸಿಗುವುದು ಕಷ್ಟ. ಆದರೆ ಸಾಧ್ಯವಾದಷ್ಟು ಸಂಯೋಜನೆಗಳಿಗೆ ಅವಕಾಶ ನೀಡಿ ಈ ವರ್ಷವೇ ಪ್ರಾರಂಭಕ್ಕೆ ಅವಕಾಶ ನೀಡಿ ಎಂದು ಕೋರಿದ್ದೇನೆ. ಈ ವರ್ಷ ವಿವಿ ಪ್ರಾರಂಭವಾಗುವುದು ಖಚಿತ.

ಡಿ.ವಿ.ಸದಾನಂದ ಗೌಡ ಕೇಂದ್ರ ಸಚಿ

click me!