ರಾಯಚೂರಿಗೆ ಐಐಟಿ ಮಂಜೂರು ಪತ್ರ ನೀಡಿದ ಕೇಂದ್ರ ಸಚಿವ

By Suvarna Web DeskFirst Published Jan 24, 2018, 8:12 PM IST
Highlights

. ರಾಜ್ಯ ಸರ್ಕಾರ ಕೂಡಲೇ ರಾಯಚೂರಿನಲ್ಲಿ 100 ಎಕರೆ ಭೂಮಿ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ನವದೆಹಲಿ(ಜ.24): ರಾಯಚೂರಿಗೆ  ಐಐಟಿ ಮಂಜೂರು ಪತ್ರವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ನೀಡಿದ್ದಾರೆ.

ನವದೆಹಲಿಯ ನಡೆದ ಇಲಾಖಾ ಕಾರ್ಯಕ್ರಮದಲ್ಲಿ ಜಾವ್ಡೇಕರ್ ಅವರು ಮಂಜೂರು ಪತ್ರವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ನೀಡಿದರು. ರಾಜ್ಯ ಸರ್ಕಾರ ಕೂಡಲೇ ರಾಯಚೂರಿನಲ್ಲಿ 100 ಎಕರೆ ಭೂಮಿ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕಕ್ಕೆ ಐಐಟಿ ಸಿಕ್ಕಿರುವುದು ಬಹಳ ಸಂತಸ ತಂದಿದೆ. ಬೆಂಗಳೂರಿಗೂ ಮತ್ತು ಇತರ ಭಾಗಗಳಿಗೂ ಡಿಜಿಟಲ್ ಸಾಕ್ಷರತೆ ಮತ್ತು ಶೈಕ್ಷಣಿಕತೆಯಲ್ಲಿ ಭಿನ್ನತೆಯಿದೆ. ಹೀಗಿರುವಾಗ  ರವಾಡಕ್ಕೆ ಐಐಟಿ ಮತ್ತು ರಾಯಚೂರಿಗೆ ಐಐಐಟಿ ದೊರಕಿರುವುದು ಮೋದಿ ಸರ್ಕಾರಕ್ಕೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ'. 2018-19ರ ಸಾಲಿನಿಂದಲೇ ಸಂಸ್ಥೆ ಆರಂಭವಾಗುತ್ತದೆ. ರಾಜ್ಯ ಸರ್ಕಾರ ಕೂಡಲೇ ತಾತ್ಕಾಲಿಕ ಕಟ್ಟಡ ನೀಡಬೇಕು ಎಂದು ಆಗ್ರಹಿಸಿದರು.

click me!