
ಮುಂಬಯಿ: ಗೋ ಏರ್ ವಿಮಾನವು ಗಣರಾಜ್ಯೋತ್ಸವಕ್ಕೆಂದು ವಿಶೇಷ ಆಫರ್ ನೀಡುತ್ತಿದ್ದು, ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ನೀಡುತ್ತಿದೆ. ದೇಶೀಯ ಯಾನ ಮಾಡಲು ಈ ಸಂಸ್ಥೆ ಕೇವಲ 726 ರೂ.ಗೆ ಟಿಕೆಟ್ ನೀಡುತ್ತಿದೆ!
ಕನಿಷ್ಠ 726 ರೂ.ಗೆ ಆರಂಭವಾಗುವ ಈ ಟಿಕೆಟ್ ದರ ಗರಿಷ್ಠ 3926 ರೂ.ವರೆಗೂ ಇರಲಿದೆ. ಗೋ ಏರ್ ಅಧಿಕೃತ ವೆಬ್‌ಸೈಟ್‌ನಿಂದಲೇ ಟಿಕೆಟ್ ಬುಕ್ ಮಾಡುವ ಗ್ರಾಹಕರಿಗೆ ಸಂಸ್ಥೆ 2500 ರೂ.ಗೆ ಟಿಕೆಟ್ ನೀಡುವ ವಿಶೇಷ ಆಫರ್ ನೀಡಿದೆ. ಈ ಆಫರ್ ಜನವರಿ 24ರಿಂದ 28ರವೆಗೆ ಲಭ್ಯವಿರಲಿದೆ. ಮಾರ್ಚ್ 1ರಿಂದ ಡಿಸೆಂಬರ್ 31ರವರೆಗೆ ಗ್ರಾಹಕರು ಈ ಆಫರ್ ಅಡಿಯಲ್ಲಿ ಟಿಕೆಟ್ ಬುಕ್ ಮಾಡಬಹುದು.
ಆದರೆ, ಈ ಆಫರ್‌ಗೆ ಕೆಲವು ಷರತ್ತುಗಳು ಅನ್ವಯಲಿಸಿದ್ದು, ಬುಕ್ ಮಾಡುವ ಸಮಯದಲ್ಲಿ ಅವುಗಳನ್ನು ಗಮನಿಸುವುದು ಒಳಿತು. ಇದೇ ಸಂದರ್ಭದಲ್ಲಿ ಪಯಣಿಸಲು ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಈ ಆಫರ್ ಅನ್ವಯವಾಗುವುದಿಲ್ಲ. ಒಮ್ಮೆ ಟಿಕೆಟ್ ಬುಕ್ ಮಾಡಿದರೆ ಯಾವುದೇ ಕಾರಣಕ್ಕೆ ಹಣವನ್ನು ಮರು ಪಾವತಿಸುವುದಿಲ್ಲ. ಅಲ್ಲದೇ, ಲಗೇಜ್‌ಗೆ ಸಾಮಾನ್ಯ ವಿಮಾನದಲ್ಲಿ ಅನ್ವಯವಾಗೋ ನಿಯಮಗಳು, ಈ ಆಫರ್ ಅಡಿಯಲ್ಲಿ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರೂ ಅನ್ವಯವಾಗುತ್ತದೆ.
ಹೆಚ್ಚಿನ ಮಾಹಿತಿಗೆ www.GoAir.inAny ಇಲ್ಲಿಗೆ ಭೇಟಿ ನೀಡಬಹುದು.
ಸ್ಪೈಸ್‌ಜೆಟ್ ಸಹ ವಿಶೇಷ ಆಫರ್ ನೀಡುತ್ತಿದ್ದು, ಸೈಟ್‌ಗೆ ಭೇಟಿ ನೀಡಿದರೆ ಹೆಚ್ಚಿನ ವಿವರ ಪಡೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.