ತ್ರಿವಳಿ ತಲಾಖ್ ತಡೆ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ

By Suvarna Web DeskFirst Published Nov 21, 2017, 3:50 PM IST
Highlights

ಬಹುಚರ್ಚಿತ ವಿಚಾರ ತ್ರಿವಳಿ ತಲಾಖ್​​​ ಪದ್ದತಿ ತಡೆಗೆ ಚಳಿಗಾಲದ ಅಧಿವೇಶನದಲ್ಲಿ  ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ನವದೆಲಿ (ನ.21): ಬಹುಚರ್ಚಿತ ವಿಚಾರ ತ್ರಿವಳಿ ತಲಾಖ್​​​ ಪದ್ದತಿ ತಡೆಗೆ ಚಳಿಗಾಲದ ಅಧಿವೇಶನದಲ್ಲಿ  ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಮುಸ್ಲೀಂ ಸಂಘಟನೆಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತರಲು ಹೊರಟಿದೆ. ಮುಸ್ಲೀಂ ಮಹಿಳೆಯರಿಗೆ ಸ್ವಾತಂತ್ರ ಕೊಡಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ಕೇಂದ್ರ ಸರ್ಕಾರ ಎಲ್ಲಾ ಪಕ್ಷಗಳಿಂದ ಸಂಪೂರ್ಣ ಬೆಂಬಲವನ್ನು ನಿರೀಕ್ಷಿಸುತ್ತಿದೆ.

ವಿವಾದ ಗ್ರಾಸವಾಗಿರುವ ತ್ರಿವಳಿ ತಲಾಖ್'ನ ಸಾಂವಿಧಾನಿಕ ಸಿಂಧುತ್ವದ  ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್’ನ ಐವರು ನ್ಯಾಯಾಧೀಶರ ಪೀಠವು ತ್ರಿವಳಿ ತಲಾಖ್ ವಿಚ್ಛೇದನದ ‘ಕೆಟ್ಟ ಹಾಗೂ ಅನಪೇಕ್ಷಿತ ‘ ರೀತಿಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.

click me!