ಕದನ ವಿರಾಮ ಉಲ್ಲಂಘನೆ : ಓರ್ವ ಯೋಧ ಹುತಾತ್ಮ

First Published May 18, 2018, 12:28 PM IST
Highlights

ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರೋರ್ವರು ಹುತಾತ್ಮರಾಗಿದ್ದಾರೆ.

ಜಮ್ಮು  (ಮೇ 18) : ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರೋರ್ವರು ಹುತಾತ್ಮರಾಗಿದ್ದಾರೆ. 

ಇದೇ ವೇಳೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳು ನಾಗರಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಯೋಧನನ್ನು ಸೀತಾರಾಮ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮೂಲದವರಾದ ಸೀತಾರಾಮ್ ಅವರು 2011ರಲ್ಲಿ ಭಾರತೀಯ ಸೇನಾ ಪಡೆಯನ್ನು ಸೇರ್ಪಡೆಯಾಗಿದ್ದರು. 

ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ, ಗಡಿ ನುಸುಳುವಿಕೆ ಹೆಚ್ಚಳ : ಕಳೆದೊಂದು ವಾರಗಳಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಗಡಿ ನುಸುಳುವಿಕೆ ಪ್ರಕರಣಗಳು ಹೆಚ್ಚಳವಾಗಿವೆ ಎಂದು ಹಿರಿಯ ಬಿಎಸ್ ಎಫ್ ಅಧಿಕಾರಿಗಳು ಹೇಳಿದ್ದಾರೆ. 

 

Photo of BSF Constable Sitaram Upadhyay, who lost his life in ceasefire violation by Pakistan in RS Pura sector of . He hails from Jharkhand & is survived by a three-year-old daughter and a one-year-old son. pic.twitter.com/ViHqGi5Rzc

— ANI (@ANI)
Two civilians injured in ceasefire violation by Pakistan in RS Pura sector undergoing treatment at a hospital. RC Kotwal, Superintendent of Police, says, 'shelling is underway. Administration will provide best possible help to civilians' pic.twitter.com/F5eQ2w260q
click me!