ಮೌಂಟ್ ಎವರೆಸ್ಟ್ ಏರಿ ಕನ್ನಡದ ಬಾವುಟ ಹಾರಿಸಿದ ಸಾಹಸಿ

First Published May 18, 2018, 10:34 AM IST
Highlights

ಮೈಸೂರಿನ ಫಾರೆಸ್ಟ್ ಗಾರ್ಡ್ ವಿಕ್ರಮ್  ಮೌಂಟ್ ಎವರೆಸ್ಟ್‌ ಶಿಖರ ಏರಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ.  ನಿನ್ನೆ ಬೆಳಗ್ಗೆ ಮೌಂಟ್ ಎವರೆಸ್ಟ್ ಶಿಖರ ಹತ್ತಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.  ವನ್ಯಜೀವಿಗಳ ರಕ್ಷಣಾ ವರ್ಷ 2017 ರಲ್ಲಿ ವಿಕ್ರಮ್ ಈ ಸಾಹಸಕ್ಕೆ ಮುಂದಾಗಿದ್ದರು. 
 

ಬೆಂಗಳೂರು (ಮೇ. 18): ಮೈಸೂರಿನ ಫಾರೆಸ್ಟ್ ಗಾರ್ಡ್ ಮೌಂಟ್ ಎವರೆಸ್ಟ್‌ ಶಿಖರ ಏರಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. 

ನೆನ್ನೆ ಬೆಳಗ್ಗೆ ಮೌಂಟ್ ಎವರೆಸ್ಟ್ ಶಿಖರ ಹತ್ತಿ ಕನ್ನಡ ಬಾವುಟವನ್ನು ಹಾರಿಸಿದ್ದಾರೆ.  ವನ್ಯಜೀವಿಗಳ ರಕ್ಷಣಾ ವರ್ಷ 2017 ರಲ್ಲಿ  ವಿಕ್ರಮ್ ಈ ಸಾಹಸಕ್ಕೆ ಮುಂದಾಗಿದ್ದರು.  ವಿಕ್ರಮ್ ಸಿ ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಹಳ್ಳಿ ತಾ. ನಿವಾಸಿ. ಈಗ ವೀರನಹೊಸಹಳ್ಳಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  2015ರಲ್ಲಿ ಅರಣ್ಯ ರಕ್ಷಕ ಸಿಬ್ಬಂದಿಯಾಗಿ ಆಯ್ಕೆಯಾಗಿದ್ದಾರೆ.  

ವಿಕ್ರಮ್ ಮೊದಲಿನಿಂದಲೂ ಕ್ರೀಡಾರಂಗದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ.  ಕಳೆದ ವರ್ಷ 50 ಕಿ.ಮೀ ಓಟದಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದ. ಮೌಂಟ್ ಎವರೆಸ್ಟ್ ಏರಿ ಕನ್ನಡದ ಬಾವುಟ ಹಾರಿಸಿದ್ದು ನಮಗೆಲ್ಲಾ ಖುಷಿ ತಂದಿದೆ ಎಂದು ಅರಣ್ಯಾಧಿಕಾರಿಗಳು ಶ್ಲಾಘಿಸಿದ್ದಾರೆ. 
 

click me!