(ವಿಡಿಯೋ)ಸಿಸಿಟಿವಿಯಲ್ಲಿ ಸೆರೆಯಾಯ್ತು ನಟಿ ಪಾರೂಲ್ ಮೇಲೆ ಬೀದಿ ನಾಯಿಗಳು ನಡೆಸಿದ ದಾಳಿಯ ದೃಶ್ಯ

Published : Jan 29, 2017, 10:19 PM ISTUpdated : Apr 11, 2018, 01:01 PM IST
(ವಿಡಿಯೋ)ಸಿಸಿಟಿವಿಯಲ್ಲಿ ಸೆರೆಯಾಯ್ತು ನಟಿ ಪಾರೂಲ್ ಮೇಲೆ ಬೀದಿ ನಾಯಿಗಳು ನಡೆಸಿದ ದಾಳಿಯ ದೃಶ್ಯ

ಸಾರಾಂಶ

ಗೋವಿಂದಾಯ ನಮಃ ಸಿನಿಮಾ ಖ್ಯಾತಿಯ ಪಾರೂಲ್ ಯಾದವ್  ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು  ಹಳೆಯ ಸುದ್ದಿ. ಇದೀಗ ಆ ದಾಳಿಯ ದೃಶ್ಯಾವಳಿ ಸುವರ್ಣನ್ಯೂಸ್​ಗೆ ಲಭಿಸಿದೆ.

ಮುಂಬೈ(ಜ.30): ಗೋವಿಂದಾಯ ನಮಃ ಸಿನಿಮಾ ಖ್ಯಾತಿಯ ಪಾರೂಲ್ ಯಾದವ್  ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು  ಹಳೆಯ ಸುದ್ದಿ. ಇದೀಗ ಆ ದಾಳಿಯ ದೃಶ್ಯಾವಳಿ ಸುವರ್ಣನ್ಯೂಸ್​ಗೆ ಲಭಿಸಿದೆ.

ದಿನಾಂಕ:  23-1-2016, ಸಮಯ: ಸಂಜೆ 5.30, ಸ್ಥಳ : ಜೋಗೇಶ್ವರಿ ರಸ್ತೆ, ಮುಂಬೈ

ಸರಿಯಾಗಿ  ಒಂದು ವಾರದ ಹಿಂದೆ  ನಟಿ ಪಾರೂಲ್​ ಯಾದವ್​  ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಮುಂಬೈನ  ಜೋಗೇಶ್ವರಿ ಅಪಾರ್ಟ್​'ಮೆಂಟ್​ ಬಳಿ ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್​'ಗೆ ಹೋಗುವಾಗ  ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ ಪಾರೂಲ್​'ಳ  ಕಾಲು, ಕೈ ಹಾಗೂ  ತಲೆ ಭಾಗಕ್ಕೆ   ಕಚ್ಚಿತ್ತು.

ಕೂಡಲೇ  ಪಾರೂಲ್​'ಳನ್ನು  ಮುಂಬೈನ ಕೋಕಿಲಾ ಬೇನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದು ಒಂದು ವಾರದ ಬಳಿಕ ಸುವರ್ಣನ್ಯೂಸ್'​ಗೆ  ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭಿಸಿವೆ. ಜನವರಿ 23ರ ಸಂಜೆ  5.30ರ ಸುಮಾರಿಗೆ ತಮ್ಮ ನಾಯಿ ಜೊತೆ ವಾಕ್​ ಮಾಡುತ್ತಿದ್ದ ಪಾರೂಲ್​ ಕಡೆ  ಮೂರ್ನಾಲ್ಕು ಬೀದಿ ನಾಯಿಗಳು ನುಗ್ಗಿ ಏಕಾಏಕಿ ದಾಳಿ ನಡೆಸಿವೆ.

ನಾಯಿಯೊಂದಿಗೆ ನೆಲಕ್ಕೆ ಬಿದ್ದ  ಪಾರೂಲ್​ ಮೇಲೆ ನಾಯಿಗಳು ದಾಳಿ ನಡೆಸಿವೆ. ಕೂಡಲೇ ಅಪಾರ್ಟ್​ಮೆಂಟ್​ ನಿವಾಸಿಗಳು ನಾಯಿಗಳನ್ನು ಓಡಿಬಂದು ನಾಯಿಗಳನ್ನು  ಓಡಿಸಿದ್ದಾರೆ.  ಈ ಎಲ್ಲಾ  ಘಟನೆಗಳು ಅಪಾರ್ಟ್​ಮೆಂಟ್​ನ ಸಿಸಿಟಿವಿ ಕ್ಯಾಮೆರಾದಲ್ಲಿ  ಸೆರೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ