ಸಿಸಿಬಿ ಪೊಲೀಸರಿಂದಲೇ ಹಣ ಗುಳುಂ!

Published : Dec 01, 2017, 09:34 PM ISTUpdated : Apr 11, 2018, 12:56 PM IST
ಸಿಸಿಬಿ ಪೊಲೀಸರಿಂದಲೇ ಹಣ ಗುಳುಂ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ ಮುಖ ಬೆಲೆಯ ನೋಟ್ ಬ್ಯಾನ್ ಮಾಡಿ ವರ್ಷವೇ ಕಳೆದು ಹೋಯ್ತು.  ಆದರೂ ಅಮಾನ್ಯಗೊಂಡ ನೋಟ್ ಲೀಲೆಗಳು ಮಾತ್ರ ನಿಂತಿಲ್ಲ. ಈ ಸಂಬಂಧ  ಹೈಗ್ರೌಂಡ್ಸ್ ಪೊಲೀಸರಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಬೆಂಗಳೂರು (ಡಿ.01): ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ ಮುಖ ಬೆಲೆಯ ನೋಟ್ ಬ್ಯಾನ್ ಮಾಡಿ ವರ್ಷವೇ ಕಳೆದು ಹೋಯ್ತು.  ಆದರೂ ಅಮಾನ್ಯಗೊಂಡ ನೋಟ್ ಲೀಲೆಗಳು ಮಾತ್ರ ನಿಂತಿಲ್ಲ. ಈ ಸಂಬಂಧ  ಹೈಗ್ರೌಂಡ್ಸ್ ಪೊಲೀಸರಿಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ತಮ್ಮ ಮನೆಗೆ ಸಿಸಿಬಿ ಪೊಲೀಸರು ಎಂದು ಹೇಳಿಕೊಂಡು ಬಂದು ಸುಮಾರು 3  ಕೋಟಿ ಹಳೆಯ ನೋಟನ್ನು ರೂ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು. ಆ ದೂರಿನ ಅನ್ವಯ ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಅಮಾನ್ಯ ನೋಟನ್ನು ತೆಗೆದುಕೊಂಡು ಹೋಗಿದ್ದು ಹೊಂಬೇಗೌಡ ಮತ್ತು  ಗಂಗಾಧರ್ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಸಂಬಂಧ ಎಸಿಪಿ ಮರಿಯಪ್ಪನವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ತಮಿಳು ನಾಡಿನಿಂದ ಬಂದ ವ್ಯಕ್ತಿಯಿಂದ ಸಿಸಿಬಿ ಎಸಿಪಿ ಮರಿಯಪ್ಪ ಮತ್ತು ಪೇದೆಗಳು 3 ಕೋಟಿ ಅಮಾನ್ಯ ನೋಟನ್ನು ದೋಚಿರುವ ಆರೋಪ ಕೇಳಿ ಬಂದಿತ್ತು. ಈ ಹಣವನ್ನು ಕೇರಳದಲ್ಲಿ  ಕೋಟಿಗೆ 8 ಲಕ್ಷದಂತೆ ಬದಲಾಯಿಸಿ ಗುಳಂ ಮಾಡಿದ್ದರಂತೆ. ಆ ನಂತರ ಹಿರಿಯ ಅಧಿಕಾರಿಗೆ ತಮಿಳುನಾಡು ಮೂಲದ ವ್ಯಕ್ತಿ ದೂರು ನೀಡಿದ್ದ. ಇದರಿಂದ ಕೆರಳಿದ ಹಿರಿಯ ಅಧಿಕಾರಿ ಎಸಿಪಿಯನ್ನು ಕರೆದು ಮೂರು ಕೋಟಿ ಹಳೆಯ ನೋಟನ್ನು ವಾಪಸ್ ಕೊಡುವಂತೆ ಸೂಚಿಸಿದ್ದರಂತೆ.  ಆದರೆ ಹಣ ಹೊಂದಿಸದೇ ಸಿಸಿಬಿ ಖಜಾನೆಗೆ ಕೈ ಹಾಕಿ 3 ಕೋಟಿ ದೋಚಿರುವ ಆರೋಪವಿದೆ. ಆ ಹಣವನ್ನು ಸರಿದೂಗಿಸಲು ಶೇಷಾದ್ರಿಪುರದ ಮಹಿಳೆಯ ಮನೆಗೆ ನುಗ್ಗಿ ಕೋಟಿ ಹಣ ದೋಚಿದರು ಎನ್ನಲಾಗುತ್ತಿದೆ. ಸಿಸಿಬಿ ಅದಿಕಾರಿಗಳ ಶಾಮೀಲಿನ ಬಗ್ಗೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಸೂಚಿಸಿದ್ದಾರೆ.

ಸದ್ಯ ಡಿಸಿಪಿ ಚಂದ್ರಗುಪ್ತ ಮತ್ತು ಹೈಗ್ರೌಂಡ್ಸ್ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಎಸಿಪಿ ಮರಿಯಪ್ಪನ ಶಾಮೀಲಿನ ಬಗ್ಗೆ ತನಿಖೆಯಿಂದಷ್ಟೇ ಖಚಿತವಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!