ಕಾರ್ತಿ ಚಿದಂಬರಂಗೆ ಲುಕ್'ಔಟ್ ನೋಟಿಸ್

By Suvarna Web DeskFirst Published Aug 4, 2017, 6:20 PM IST
Highlights

ಅಕ್ರಮ ವ್ಯವಹಾರ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂಗೆ ದೇಶ ಬಿಟ್ಟು ಹೋಗದಂತೆ ಸರ್ಕಾರ ಲುಕ್’ಔಟ್ ನೋಟಿಸ್ ನೀಡಿದೆ.

ನವದೆಹಲಿ (ಆ.04): ಅಕ್ರಮ ವ್ಯವಹಾರ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂಗೆ ದೇಶ ಬಿಟ್ಟು ಹೋಗದಂತೆ ಸರ್ಕಾರ ಲುಕ್’ಔಟ್ ನೋಟಿಸ್ ನೀಡಿದೆ.

ಈ ನಿರ್ದೇಶನವನ್ನು ರದ್ದುಗೊಳಿಸುವಂತೆ ಕಾರ್ತಿ ಚಿದಂಬರಂ ಮದ್ರಾಸ್ ಹೈ ಕೋರ್ಟ್'ಗೆ ಮನವಿ ಸಲ್ಲಿಸಿದ್ದಾರೆ. ಕೋರ್ಟ್ ಸೋಮವಾರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಕಾರ್ತಿ  ಚಿದಂಬರಂ ವಿದೇಶ ಪ್ರಯಾಣ ಮಾಡುವುದಿದ್ದರೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಗಮನಕ್ಕೆ ತರಬೇಕು. ಅವರು ನುಮತಿ ನೀಡಿದರಷ್ಟೇ ಕಾರ್ತಿ ವಿದೇಶ ಪ್ರಯಾಣ ಮಾಡಬಹುದು.

2007 ರಲ್ಲಿ ಪಿ ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಒಡೆತನದ ಐಎನ್’ಎಕ್ಸ್ ಮೀಡಿಯಾಗೆ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಿಂದ ಅನುಮತಿ ಪಡೆಯುವಲ್ಲಿ ಅಕ್ರಮವೆಸಗಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಸಿಬಿಐ ಕಾರ್ತಿ ಚಿದಂಬರಂ ಮೇಲೆ ಪ್ರಕರಣ ದಾಖಲಿಸಿದೆ.  

click me!