ಕಲ್ಲಿದ್ದಲು ಹಗರಣ: ಸಿಬಿಐ ಮಾಜಿ ನಿರ್ದೇಶಕರ ವಿರುದ್ಧ ಎಫ್'ಐಆರ್

By Suvarna Web DeskFirst Published Apr 25, 2017, 3:55 PM IST
Highlights

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸಿನ್ಹಾ ವಿರುದ್ಧ 3 ತಿಂಗಳ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ಸಿನ್ಹಾ ಅವರು ನಿರ್ದೇಶಕರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾರಣ 2017ರ ಜನವರಿಯಲ್ಲಿ ಸುಪ್ರೀಂ ಕೋರ್ಟ್'ನ ತ್ರಿಸದಸ್ಯತ್ವ ಪೀಠ ತನಿಖೆಗೆ ಆದೇಶಿಸಿತ್ತು.

ನವದೆಹಲಿ(ಏ.25): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಭಾಗಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರ ವಿರುದ್ಧ ಸಿಬಿಐ ಎಫ್'ಐಆರ್ ದಾಖಲಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಸಿನ್ಹಾ ವಿರುದ್ಧ 3 ತಿಂಗಳ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ಸಿನ್ಹಾ ಅವರು ನಿರ್ದೇಶಕರಾಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾರಣ 2017ರ ಜನವರಿಯಲ್ಲಿ ಸುಪ್ರೀಂ ಕೋರ್ಟ್'ನ ತ್ರಿಸದಸ್ಯತ್ವ ಪೀಠ ತನಿಖೆಗೆ ಆದೇಶಿಸಿತ್ತು.

ಸಿನ್ಹಾ ಅವರು 2012-14ರ ಅವಧಿಯಲ್ಲಿ  ಸಿಬಿಐ ನಿರ್ದೇಶಕರಾಗಿದ್ದಾಗ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದ ಹಿರಿಯ ರಾಜಕಾರಣಿಗಳು, ಉದ್ಯಮಿಗಳನ್ನು ಒಳಗೊಂಡಂತೆ ಆರೋಪಿಗಳೊಂದಿಗೆ ತಮ್ಮ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದ್ದರು. ಹಿರಿಯ ನ್ಯಾಯವಾದಿಯಾದ ಪ್ರಶಾಂತ್ ಭೂಷಣ್, ಸಿನ್ಹಾ ಹಗರಣದಲ್ಲಿ ಶಾಮೀಲಾಗಿದ್ದು ಇವರ ವಿರುದ್ಧ ಸಿಬಿಐ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

click me!