ಮೋದಿ ಜನ್ಮಸ್ಥಳ ಶೀಘ್ರ ಮ್ಯೂಸಿಯಂ

Published : Apr 25, 2017, 02:36 PM ISTUpdated : Apr 11, 2018, 12:35 PM IST
ಮೋದಿ ಜನ್ಮಸ್ಥಳ ಶೀಘ್ರ ಮ್ಯೂಸಿಯಂ

ಸಾರಾಂಶ

ಮೋದಿ ಅವರ ಕುಟುಂಬ ಸಾಧಾರಣವಾದ ಈ ಮನೆಯನ್ನು ಮಾರಾಟ ಮಾಡಿ ಗಾಂಧಿ ನಗರಕ್ಕೆ ಸ್ಥಳಾಂತರಗೊಂಡಿತ್ತು. ಈ ಮನೆಯಲ್ಲಿ ಮೋದಿ ಅವರು ತಮ್ಮ ಬಾಲ್ಯವನ್ನು ಕಳೆದಿದ್ದರು. ಇದೇ ವೇಳೆ, ಗುಜರಾತ್ ಪ್ರವಾಸೋದ್ಯಮ ಇಲಾಖೆ ಕೂಡ ವಡನಗರ- ಮೊಧೆರಾ- ಪಠಾಣ ಅನ್ನು ಪಾರಂಪರಿಕ ಪ್ರವಾಸಿ ಸರ್ಕ್ಯೂಟ್ ಆಗಿ ಅಭಿವೃದ್ಧಿ ಪಡಿಸುತ್ತಿದೆ.

ಅಹ್ಮದಾಬಾದ್(ಏ.25): ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯ ಜೀವನವನ್ನು ಕಳೆದಿದ್ದ ಮನೆ ಶೀಘ್ರದಲ್ಲೇ ಮ್ಯೂಸಿಯಂ ಆಗಿ ಪರಿವರ್ತನೆ ಆಗಲಿದೆ. ಮೋದಿ ಅವರ ಕುಟುಂಬ ಈ ಹಿಂದೆ ವಾಸಿಸಿದ್ದ ಗುಜರಾತಿನ ಮೆಹ್ಸಾನಾ ಜಿಲ್ಲೆಯ ವಡನಗರದಲ್ಲಿರುವ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿಸಿದೆ.

ಮೋದಿ ಅವರ ಕುಟುಂಬ ಸಾಧಾರಣವಾದ ಈ ಮನೆಯನ್ನು ಮಾರಾಟ ಮಾಡಿ ಗಾಂಧಿ ನಗರಕ್ಕೆ ಸ್ಥಳಾಂತರಗೊಂಡಿತ್ತು. ಈ ಮನೆಯಲ್ಲಿ ಮೋದಿ ಅವರು ತಮ್ಮ ಬಾಲ್ಯವನ್ನು ಕಳೆದಿದ್ದರು. ಇದೇ ವೇಳೆ, ಗುಜರಾತ್ ಪ್ರವಾಸೋದ್ಯಮ ಇಲಾಖೆ ಕೂಡ ವಡನಗರ- ಮೊಧೆರಾ- ಪಠಾಣ ಅನ್ನು ಪಾರಂಪರಿಕ ಪ್ರವಾಸಿ ಸರ್ಕ್ಯೂಟ್ ಆಗಿ ಅಭಿವೃದ್ಧಿ ಪಡಿಸುತ್ತಿದೆ.

ಸ್ವದೇಶ ದರ್ಶನ ಸರ್ಕೀಟ್‌ಗೆ ಕೇಂದ್ರ ಸರ್ಕಾರ 99.81 ಕೋಟಿ ರು. ನೀಡಿದೆ. ಜೊತೆಗೆ ಮೋದಿ ಚಹಾ ಮಾರುತ್ತಿದ್ದ ವಡನಗರ ರೈಲು ನಿಲ್ದಾಣದ ಅಭಿವೃದ್ಧಿಗೂ ಇತ್ತೀಚೆಗೆ 7.9 ಕೋಟಿ ರು. ಲಭಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Sringeri Assembly seat recount: ರಾಜೇಗೌಡ ಸೋಲು, ಶೃಂಗೇರಿ ಕ್ಷೇತ್ರಕ್ಕೀಗ ಜೀವರಾಜ್‌ ಶಾಸಕ!
ದಾವಣಗೆರೆ ಬಾಗಲಕೋಟೆ ಉಪಚುನಾವಣ ಫಲಿತಾಂಶದ ನಡುವೆಯೇ ಮಹತ್ವದ ಬೆಳವಣಿಗೆ; ಮುಂದಿನ ಸಿಎಂ ಖರ್ಗೆ? ರಾಯರಡ್ಡಿ ಹೇಳಿದ್ದೇನು?