ಮೇವು ಹಗರಣ: ಇಂದು ಸಿಬಿಐ ನ್ಯಾಯಾಲಯದಿಂದ ತೀರ್ಪು ಪ್ರಕಟ

By Suvarna Web DeskFirst Published Jan 4, 2018, 8:09 AM IST
Highlights

ಬಹುಕೋಟಿ ರೂಪಾಯಿಗಳ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​​'ಗೆ ಇಂದು ನ್ಯಾಯಾಲಯ ಶಿಕ್ಷೆ ಪ್ರಕಟಗೊಳಿಸಲಿದೆ.

ರಾಂಚಿ  (ಜ.04): ಬಹುಕೋಟಿ ರೂಪಾಯಿಗಳ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್​​'ಗೆ ಇಂದು ನ್ಯಾಯಾಲಯ ಶಿಕ್ಷೆ ಪ್ರಕಟಗೊಳಿಸಲಿದೆ.

ರಾಂಚಿಯ ಸಿಬಿಐ ನ್ಯಾಯಾಲಯದ ಹಿರಿಯ ನ್ಯಾಯವಾದಿ ವಿದೇಶ್ವರ್ ಪ್ರಸಾದ್ ನಿಧನದ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪವನ್ನು ಮುಂದೂಡುವಂತೆ ವಕೀಲರು ಮನವಿ ಮಾಡಿದ್ದರು.  ಆದ್ದರಿಂದ  ನಿನ್ನೆ ಪ್ರಕಟವಾಗಬೇಕಿದ್ದ ಶಿಕ್ಷೆಯ ಪ್ರಮಾಣದ ತೀರ್ಪನ್ನು ನ್ಯಾಯಾಲಯ ಇಂದು ಪ್ರಕಟಿಸಲಿದೆ.

ಮೇವು ಹಗರಣಕ್ಕೆ ಸಂಬಂಧಪಟ್ಟಂತೆ ಲಾಲು ಸೇರಿದಂತೆ 15 ಆರೋಪಿಗಳು ತಪ್ಪಿಸ್ಥರೆಂದು ಜಾರ್ಖಂಡ್‍'ನ  ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ದೋಷಿಗಳೆಂದು ಘೋಷಿಸಿದ್ದು, ಇಂದು ಲಾಲು ಎಷ್ಟು ವರ್ಷಗಳಿಗೆ ಜೈಲು ಪಾಲಾಗಲಿದ್ದಾರೆ ಎಂಬುದು ಕುತೂಹಲವಾಗಿದೆ.

click me!