ಅಕ್ರಮ ಟೆಲಿಫೋನ್ ಎಕ್ಸ್'ಚೈಂಜ್ ಪ್ರಕರಣ: ಮಾರನ್ ಸಹೋದರರಿಗೆ ಬಿಗ್ ರಿಲೀಫ್

By Suvarna Web DeskFirst Published Mar 14, 2018, 3:12 PM IST
Highlights

ವಿಶೇಷನ್ಯಾಯಾಧೀಶನಟರಾಜನ್ಅವರುಮಾಜಿಕೇಂದ್ರಸಚಿವದಯಾನಿಧಿಮಾರನ್ಹಾಗೂಸಹೋದರಉದ್ಯಮಿಕಲಾನಿಥಿಮಾರನ್ಸೇರಿದಂತೆಎಲ್ಲ 7 ಅಪರಾಧಿಗಳನ್ನುಪ್ರಕರಣದಿಂದಖುಲಾಸೆಗೊಳಿಸಿದೆ.

ನವದೆಹಲಿ(ಮಾ.14): ಅಕ್ರಮ ಟೆಲಿಫೋನ್ ಎಕ್ಸ್'ಚೈಂಜ್ ಪ್ರಕರಣದಲ್ಲಿ ಮಾರನ್ ಸಹೋದರರಾದ ಕಲಾನಿಧಿ ಹಾಗೂ ದಯಾನಿಧಿ ಅವರನ್ನು ದೆಹಲಿಯ ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ.

ವಿಶೇಷ ನ್ಯಾಯಾಧೀಶ ನಟರಾಜನ್ ಅವರು ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಹಾಗೂ ಸಹೋದರ ಉದ್ಯಮಿ ಕಲಾನಿಥಿ ಮಾರನ್ ಸೇರಿದಂತೆ ಎಲ್ಲ 7 ಅಪರಾಧಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಇವರ ವಿರುದ್ಧ ಪ್ರಕರಣಗಳನ್ನು ಸಾಮೀತುಗೊಳಿಸಲು ಯಾವುದೇ ಪ್ರಾಥನಿಕ ಪುರಾವೆಗಳಿಲ್ಲದ ಕಾರಣ ಪ್ರಕರಣವನ್ನು ವಜಾಗೊಳಿಸಲಾಗಿದೆ.

ದಯಾನಿಧಿ ಮಾರನ್ ಅವರು ತಮ್ಮ ಮನೆಯಲ್ಲಿ 764 ಸಂಪರ್ಕಗಳನ್ನು ಅಕ್ರಮವಾಗಿ ಸನ್ ಟಿವಿ ಡಾಟಾಕ್ಕೆ ಅಪ್'ಲಿಂಕ್'ಗೊಳಿಸಿದ್ದರು. ಇದರಿಂದ ಚೆನ್ನೈ'ನ ಬಿಎಸ್'ಎನ್'ಎಲ್ ಹಾಗೂ ದೆಹಲಿಯ ಎಂಟಿಎನ್'ಎಲ್'ಗಳಿಗೆ 1.78 ಕೋಟಿ ರೂ. ನಷ್ಟವಾಗಿತ್ತು.

click me!