‘ಮನ್ ಕೀ ಬಾತ್' ಡೈಲಾಗ್ ತೆಗೆದು ಹಾಕಲು ಸೂಚನೆ

By Suvarna Web DeskFirst Published Mar 26, 2017, 6:06 AM IST
Highlights

ಮನ್ಕೀಬಾತ್‌' ಪ್ರಧಾನಿನರೇಂದ್ರಮೋದಿಅವರದೇಶವನ್ನುದ್ದೇಶಿಸಿಮಾತನಾಡುವರೇಡಿಯೊಕಾರ್ಯಕ್ರಮವಾಗಿದ್ದು

ನವದೆಹಲಿ(ಮಾ.26): ಮಡಿವಂತಿಕೆ ಹೆಸರಿನಲ್ಲಿ ಚಿತ್ರಗಳಿಗೆ ಕತ್ತರಿ ಪ್ರಯೋಗ ಮಾಡುವಲ್ಲಿ ‘ಹೆಸರುವಾಸಿ'ಯಾಗಿರುವ ಪಹ್ಲಾಜ್‌ ನಿಹಲಾನಿ ನೇತೃತ್ವದ ಸೆನ್ಸಾರ್‌ ಮಂಡಳಿ ಇದೀಗ ‘ಮನ್‌ ಕೀ ಬಾತ್‌' ಡೈಲಾಗ್‌ಗಳನ್ನು ಕೈಬಿಡುವಂತೆ ಚಿತ್ರ ನಿರ್ಮಾಪಕರಿಗೆ ಸೂಚನೆ ನೀಡಿದೆ. ‘ಮನ್‌ ಕೀ ಬಾತ್‌' ಪ್ರಧಾನಿ ನರೇಂದ್ರ ಮೋದಿ ಅವರ ದೇಶವನ್ನುದ್ದೇಶಿಸಿ ಮಾತನಾಡುವ ರೇಡಿಯೊ ಕಾರ್ಯಕ್ರಮವಾಗಿದ್ದು, ಆ ಪದವನ್ನು ಬಳಸಿ ಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ. ಚಿತ್ರದಲ್ಲಿರುವ ಪ್ರತಿ ಡೈಲಾಗ್‌ನ ಮೊದಲನೇ ಮಾತಿನಲ್ಲಿರುವ ‘ಮನ್‌ ಕಿ ಬಾತ್‌' ತೆಗೆದು ಹಾಕುವಂತೆ ಸೂಚಿಸಲಾಗಿದೆ.

click me!