ಕಾವೇರಿ ತೀರ್ಪು: ರಾಜ್ಯಕ್ಕೇನು ಆತಂಕ ?

By Suvarna Web deskFirst Published Feb 16, 2018, 9:52 AM IST
Highlights

ಕರ್ನಾಟಕ,ತಮಿಳುನಾಡು, ಕೇರಳ, ಪುದುಚೇರಿಯಅಣೆಕಟ್ಟುಗಳ ನಿಯಂತ್ರಣ ತೆಗೆದುಕೊಳ್ಳಲಿದೆಎನ್ನಲಾಗಿರುವ ಕಾವೇರಿ ಜಲ ನಿರ್ವಹಣಾಮಂಡಳಿ ಕುರಿತೂ ತೀರ್ಪು ಬರುವ ಸಾಧ್ಯತೆ.

ಅಂತರ್ ಕೊಳ್ಳ ನೀರು ಹಂಚಿಕೆ:

ನ್ಯಾಯಾಧಿಕರಣದ ಐತೀರ್ಪಿನಲ್ಲಿ ಬೆಂಗಳೂರಿನ ಕುಡಿವ ನೀರಿಗೆ ನಿಗದಿಪಡಿಸಿದ್ದ ನೀರಿನ ಪ್ರಮಾಣ ಕಡಿಮೆ ಇತ್ತು. ಇದನ್ನು ಕರ್ನಾಟಕ ಪ್ರಶ್ನಿಸಿದ್ದು, ಸುಪ್ರೀಂಕೋರ್ಟ್ ಪುರಸ್ಕರಿಸಿದರೆ ಬೆಂಗಳೂರಿಗೆ ಕುಡಿಯುವ ನೀರು ಸಿಗುತ್ತದೆ. ಇಲ್ಲವಾದಲ್ಲಿ ಸಂಕಷ್ಟ.

ನಿರ್ವಹಣಾ ಮಂಡಳಿ

ಕರ್ನಾಟಕ,ತಮಿಳುನಾಡು, ಕೇರಳ, ಪುದುಚೇರಿಯ ಅಣೆಕಟ್ಟುಗಳ ನಿಯಂತ್ರಣ ತೆಗೆದುಕೊಳ್ಳಲಿದೆ ಎನ್ನಲಾಗಿರುವ ಕಾವೇರಿ ಜಲ ನಿರ್ವಹಣಾ ಮಂಡಳಿ ಕುರಿತೂ ತೀರ್ಪು ಬರುವ ಸಾಧ್ಯತೆ. ಇದರ ಸ್ವರೂಪ, ಕಾರ್ಯವ್ಯಾಪ್ತಿ, ಅಧಿಕಾರ ಎಲ್ಲವೂ ಅಸ್ಪಷ್ಟ. ಆದರೆ, ಕಾವೇರಿ ನೀರಿನ ಮೇಲಿನ ಹಿಡಿತ ಮಂಡಳಿಯ ಪಾಲಾದರೆ ಕರ್ನಾಟಕಕ್ಕೆ ಸಂಕಷ್ಟ ತಪ್ಪಿದ್ದಲ್ಲ.

ಎಷ್ಟು ಟಿಎಂಸಿ:

ನ್ಯಾಯಾಧಿಕರಣ ಐತೀರ್ಪಿ'ನಲ್ಲಿ ಕರ್ನಾಟಕಕ್ಕೆ ವಾರ್ಷಿಕ 270 ಟಿಎಂಸಿ ನೀರು ಹಂಚಿತ್ತು. ಇದು ಸಾಲದು, 465 ಟಿಎಂಸಿ ಬೇಕು ಎಂದು ಕರ್ನಾಟಕ ವಾದಿ ಸುತ್ತಾ ಬಂದಿದೆ. ಆದರೆ, 270ಕ್ಕಿಂತಲೂ ಕಡಿಮೆ ನೀರು ಸುಪ್ರೀಂಕೋರ್ಟ್ ಹಂಚಿದರೇನು ಗತಿ ಎಂಬುದು ಇನ್ನೊಂದು ಆತಂಕ.

click me!