ಡಿಜಿಟಲ್ ವ್ಯವಹಾರ ಮಾಡೋರಿಗೆ ಗುಡ್ ನ್ಯೂಸ್

First Published Apr 30, 2018, 12:03 PM IST
Highlights

ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ನಿಟ್ಟಿನಿಂದ ಡಿಜಿಟಲ್ ವ್ಯವಹಾರದ ಮೇಲೆ ವ್ಯಾಪಾರಿಗಳಿಗೆ ಕ್ಯಾಶ್‌ಬ್ಯಾಕ್ ಹಾಗೂ ಗ್ರಾಹಕರಿಗೆ ರಿಯಾಯತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ನವದೆಹಲಿ: ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ನಿಟ್ಟಿನಿಂದ ಡಿಜಿಟಲ್ ವ್ಯವಹಾರದ ಮೇಲೆ ವ್ಯಾಪಾರಿಗಳಿಗೆ ಕ್ಯಾಶ್‌ಬ್ಯಾಕ್ ಹಾಗೂ ಗ್ರಾಹಕರಿಗೆ ರಿಯಾಯತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಕಂದಾಯ ಇಲಾಖೆ ಸಿದ್ಧಪಡಿಸಿರುವ ಪ್ರಸ್ತಾವನೆಯ ಪ್ರಕಾರ, ಡಿಜಿಟಲ್ ವಿಧಾನದ ಮೂಲಕ ಹಣ ಪಾವತಿ ಮಾಡುವ ಗ್ರಾಹಕರಿಗೆ ಎಂಆರ್‌ಪಿ  ಮೇಲೆ ರಿಯಾಯತಿ ನೀಡಲಾಗುತ್ತದೆ. ರಿಯಾಯತಿಯ ಮೊತ್ತಕ್ಕೆ 100 ರು. ಮಿತಿ ವಿಧಿಸಲಾಗಿದೆ.

ಇದೇ ವೇಳೆ, ವ್ಯಾಪಾರಿಗಳಿಗಳೂ ಇದರ ಪ್ರಯೋಜನ ಲಭ್ಯವಾಗಲಿದ್ದು, ಡಿಜಿಟಲ್ ವಹಿವಾಟಿನ ಮೂಲಕ ನಡೆಸುವ ಒಟ್ಟು ವ್ಯವಹಾರದ ಮೇಲೆ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಪ್ರಸ್ತಾವನೆಯನ್ನು ಮೇ 4ರಂದು ನಡೆಯಲಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‌ಟಿ ಮಂಡಳಿಯ ಮುಂದೆ ಮಂಡಿಸುವ ಸಾಧ್ಯತೆ ಇದೆ.

ಪ್ರಧಾನಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ಧನ ನೀಡುವ ವಿಷಯ ಚರ್ಚೆಗೆ ಬಂದಿದೆ. ಅಲ್ಲದೇ ವ್ಯಾಪಾರಸ್ತರಿಗೆ ಕ್ಯಾಶ್ ಬ್ಯಾಕ್ ಜೊತೆ ತೆರಿಗೆ ಕ್ರೆಡಿಟ್ ನೀಡಲು ಕೂಡ
ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. 

click me!