ಅಂಬಿಡೆಂಟ್ ಅವ್ಯವಹಾರದ ಡೀಲ್ ಪ್ರಕರಣಕ್ಕೆ ಸಂಬಂಧ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನ 4 ದಿನ ಜೈಲಿ ಕಳುಹಿಸಿದ್ದ ಸಿಸಿಬಿ, ಇದೀಗ ಮತ್ತೊಬ್ಬರಿಗೆ ಖೆಡ್ಡಾ ರೆಡಿ ಮಾಡಿದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಸಿಸಿಬಿ ಹಿಟ್ ಲಿಸ್ಟ್ ನಲ್ಲಿರೋರು ಯಾರು?
ಬೆಂಗಳೂರು, [ನ.15]: ಸಿಸಿಬಿ ಪೊಲೀಸರ ಮುಂದಿನ ಟಾರ್ಗೆಟ್ ಸ್ವಯಂ ಘೋಷಿತ ದೇವಮಾನವ ಬಿಡದಿಯ ಸ್ವಾಮಿ ನಿತ್ಯಾನಂದ ಎನ್ನಲಾಗುತ್ತಿದೆ. ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಿಸಲು ಸಿಸಿಬಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಗಾಂಜಾ ಸೇವನೆ ಮಾಡಿದ್ರೆ ಮುಕ್ತಿ ಸಿಗುತ್ತೆ. ಗಾಂಜಾ ಸೇವನೆಯಿಂದ ಆಕಾಶದಲ್ಲಿ ತೇಲಬಹುದು ಎಂದು ಸಾರ್ವಜನಿಕವಾಗಿ ಗಾಂಜಾ, ಅಫೀಮು ಸೇವನೆ ಮಾಡುವಂತೆ ಪ್ರಚೋದನೆ ನೀಡಿದ್ದರು.
ಈ ಆರೋಪದ ಮೇಲೆ ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಿಸಲು ಸಿಸಿಬಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಗಾಂಜಾ ಸೇವನೆಗೆ ನಿತ್ಯಾನಂದ ಸ್ವಾಮಿ ಪ್ರಚೋದನೆ ಕೊಟ್ಟಿದ್ದಾರೆ ಎಂದು ಸಾರ್ಜನಿಕರು ನಿತ್ಯಾನಂದನ ವಿರುದ್ಧ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಇನ್ನೆರಡು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಿತ್ಯಾನಂದ ಸ್ವಾಮಿಗೆ ನೋಟಿಸ್ ನೀಡಲು ಸಿಸಿಬಿ ಚಿಂತನೆ ನಡೆಸಿದೆ.