
ಜನ ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಏನೇನೂ ಹೊಸ ಪ್ರಯೋಗ ಮಾಡುತ್ತಾರೆ. ಇದಕ್ಕೆ ಹೊಸ ಉದಾಹರಣೆ ಉತ್ತರಪ್ರದೇಶದ ಸಿಎಸ್‌ಜೆಎಂ ವಿವಿಯ ಗಣಿತ ಪ್ರೊಫೆಸರ್ ವಿ.ಎನ್.ಪಾಲ್. ಸದ್ಯ ಚಲಾವಣೆಯಲ್ಲಿರುವ ವಿವಿಧ ಮೌಲ್ಯದ ನಾಣ್ಯಗಳನ್ನು ಬ್ಯಾಂಕ್ ಸೇರಿ ಹಲವು ಕಡೆ ಸ್ವೀಕರಿಸುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರಲು ಪಾಲ್ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಶೀಘ್ರವೇ ಕಾನ್ಪುರದ ದೇಹತ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಯಾಗಿದೆ. ಇದಕ್ಕೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಪಾಲ್ ಠೇವಣಿ ಮೊತ್ತವಾದ 15000 ರು.ಗಳನ್ನು ನಾಣ್ಯಗಳ ರೂಪದಲ್ಲಿ ತಂದುಕೊಟ್ಟಿದ್ದಾರೆ. ಆದರೆ ಅಗತ್ಯ ಪ್ರಮಾಣದ ಸೂಚಕರಿಲ್ಲ ಎಂಬ ಕಾರಣಕ್ಕೆ ಪಾಲ್ ನಾಮಪತ್ರ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.