
ಬೆಂಗಳೂರು: ಮುಸ್ಲಿಂ ವೈಯಕ್ತಿಕ ಕಾನೂನು ಜಾಗೃತಿ ಅಭಿಯಾನವನ್ನು ಏ.23ರಿಂದ ಮೇ 7ರವರೆಗೆ ಎರಡು ವಾರಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಮುಲ್ಲಾನ ವಾಲದ್ದೀನ್‌ಖಾನ್ ಇಮಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ವೈಯಕ್ತಿಕ ಕಾನೂನು ಕುರಿತಂತೆ ಮುಸ್ಲಿಂ ಸಮುದಾಯದವರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಕಾನೂನು ಕುರಾನ್ ಹಾಗೂ ಪ್ರವಾದಿ ಶಿಕ್ಷಣಗಳ ಸಾರದಿಂದ ರಚನೆ ಯಾಗಿದೆ. ಈ ಕಾನೂನು ತಿದ್ದುಪಡಿಯ ಹಕ್ಕು ಯಾವುದೇ ಮನುಷ್ಯ ಅಥವಾ ಸಮೂಹಕ್ಕೆ ಇರುವುದಿಲ್ಲ. ಪ್ರವಾದಿ ಆಜ್ಞೆಗಳನ್ನು ಪಾಲಿಸುವುದು ಮುಸ್ಲಿಂರ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಆಗಿರುವ ಹಿನ್ನೆಲೆ ಈ ಕುರಿತು ಜಾಗೃತಿ ಅಭಿಯಾನ ಅಗತ್ಯ ಎಂದರು.
ಮುಸ್ಲಿಂ ಸಮುದಾಯ ವಿವಾಹ, ತಲಾಕ್, ವಾರಸು ಸ್ವತ್ತು, ವಧುದಕ್ಷಿಣೆ ನಿರ್ವಹಣೆ ಹಾಗೂ ಮುಸ್ಲಿಂ ವೈಯ ಕ್ತಿಕ ಕಾನೂನಿನ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಲ್ಲಿ ಅದು ಶಾಂತಿ ಮತ್ತು ನೆಮ್ಮದಿಯ ತಾಣವಾಗಲಿದೆ. ಈ ಕಾನೂನಿನಿಂದ ಜೀವನದಲ್ಲಿ ಸಾಮರಸ್ಯ, ಸೌಹಾರ್ದತೆ ಮೂಡುತ್ತದೆ. ಮುಸ್ಲಿಂರಿಗೆ ಇಸ್ಲಾಮಿನ ಕೌಟುಂಬಿಕ ಕಾನೂನಿನ ಆದೇಶಗಳನ್ನು ಅಭಿಯಾನದ ಮೂಲಕ ತಿಳಿಸಿದ್ದಲ್ಲಿ ಮುಸ್ಲಿಂ ಷರಿಯತ್ ಕಾನೂನು ಉಲ್ಲಂಘನೆ ಕಡಿಮೆಯಾಗಿ ಉತ್ತಮ ಜೀವನ ರೂಪುಗೊಳ್ಳುತ್ತದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.