
ಬೆಂಗಳೂರು(ಎ.23): ಕರ್ನಾಟಕದ ಹೆಮ್ಮೆಯ ಪುತ್ರ, ವೀರ ಯೋಧ ಎನ್‌ಎಸ್‌ಜಿ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರು ಪಠಾಣ್‌ಕೋಟ್‌ನಲ್ಲಿ ನಡೆದ ಉಗ್ರರ ಗ್ರೆನೇಡ್ ದಾಳಿಯಲ್ಲಿ ಹುತಾತ್ಮರಾಗಿ ಒಂದೂವರೆ ವರ್ಷ ಕಳೆದರೂ ರಾಜ್ಯ ಸರ್ಕಾರ ಅವರ ಹೆಸರಿನಲ್ಲಿ ಇದುವರೆಗೆ ಯಾವುದೇ ಕೆಲಸ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶ ಸೇವೆಗಾಗಿ ತನ್ನ ಪ್ರಾಣವನ್ನೇ ತೆತ್ತ ವೀರಯೋಧ ನಿರಂಜನ್ ಚಿಕ್ಕ ವಯಸ್ಸಿಗೆ ತಮ್ಮ ಕಾರ್ಯ ಕ್ಷಮತೆಯಿಂದ ಉತ್ತಮ ಹೆಸರು ಗಳಿಸಿದ್ದರು. ದುರದೃಷ್ಟವಶಾತ್ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ್ದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವತಿಯಿಂದ ನಿರಂಜನ್ ಅವರ ಹೆಸರಿ ನಲ್ಲಿ ನಗರದಲ್ಲಿ ವಿವಿಧ ಕಾರ್ಯಗಳನ್ನು ಹಮ್ಮಿ ಕೊಳ್ಳುವ ಭರವಸೆ ನೀಡಿದ್ದರು. ನಿರಂಜನ್ ವಿಧಿ ವಶರಾಗಿ ಒಂದೂವರೆ ವರ್ಷ ಕಳೆದರೂ ಸರ್ಕಾ ರದ ಭರವಸೆ ಕೇವಲ ಭರವಸೆಯಾಗಿ ಉಳಿದು ಕೊಂಡಿದೆ. ನಿರಂಜನ್ ಅವರ ಸಾಧನೆ ಮೆಚ್ಚಿ ಅವರ ಸ್ಮರಣಾರ್ಥ ಹರಿಯಾಣ ಸರ್ಕಾರ 20 ಎಕರೆ ಜಾಗದಲ್ಲಿ ಆಡಿ ಟೋರಿಯಂ ನಿರ್ಮಿಸಿ, ಅದಕ್ಕೆ ನಿರಂ ಜನ್ ಹೆಸರು ಇರಿಸಿದೆ. ಅಲ್ಲದೆ, ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಗೌರವ ಸೂಚಿಸಿದೆ. ಕೇರಳದಲ್ಲಿ ಹಲವು ರಸ್ತೆ, ಪಾರ್ಕ್, ಶಾಲಾ- ಕಾಲೇಜುಗಳಿಗೆ ನಿರಂಜನ್ ಹೆಸರು ನಾಮಕರಣ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ನಿರಂಜನ್ ಹೆಸರಿನಲ್ಲಿ ಒಂದೇ ಒಂದು ಕೆಲಸ ಮಾಡಿಲ್ಲ ಎಂದು ಆರ್ಮಿ ವೆಲ್‌ಫೇರ್ ಆ್ಯಂಡ್ ಸಪೋರ್ಟ್ ಫೋರಂನ ಮುಖ್ಯಸ್ಥ ಶಶಿಕಾಂತ್ ಶಿವಶಂಕರ್ ಆರೋಪಿಸುತ್ತಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಅತ್ಯಂತ ಚಿಕ್ಕ ವಯಸ್ಸಿಗೆ ಸೇನೆಯಲ್ಲಿ ಮಹತ್ತರ ಸಾಧನೆ ಮಾಡಿದವರು ಕನ್ನಡಿಗ ನಿರಂಜನ್‌ಕುಮಾರ್. ಬೆಂಗಳೂರಿನ ಚಚ್‌ರ್‍ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಾಂಬ್ ನಿಷ್ಕಿ್ರಯಗೊ ಳಿಸುವುದರಲ್ಲಿ ನಿಪುಣತೆ ಸಾಧಿಸಿದ್ದ ಅವರು, ತಮ್ಮ ಜೀವದ ಹಂಗು ತೊರೆದು ಸುಮಾರು 6 ಸಾವಿರ ಸುಧಾರಿತ ಬಾಂಬ್‌ಗಳನ್ನು ಯಶಸ್ವಿಯಾಗಿ ನಿಷ್ಕಿ್ರಯಗೊಳಿಸಿದ್ದರು. ಅಲ್ಲದೆ, ಅಮೆರಿಕದ ಎಫ್‌ಬಿಐ ಸೈನಿಕರಿಗೆ ತರಬೇತಿ ನೀಡಿದ ದೇಶದ ಏಕೈಕ ಎನ್‌ಎಸ್‌ಜಿ ಕಮಾಂಡೋ ನಿರಂಜನ್ ಕುಮಾರ್. ಇಂತಹ ವೀರ ಸೇನಾನಿ ಹುತಾತ್ಮರಾಗಿ ಒಂದೂವರೆ ವರ್ಷ ಕಳೆದರೂ ರಾಜ್ಯ ಸರ್ಕಾರ ನಿರಂಜನ್ ಹೆಸರಿನಲ್ಲಿ ಒಂದೇ ಒಂದು ಕೆಲಸ ಮಾಡದಿರುವುದು ನೋವಿನ ಸಂಗತಿ ಎಂದಿದ್ದಾರೆ.
ವರದಿ: ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.