ರೈಲ್ವೆ ಪ್ರಯಾಣ ದರ ಏರಿಸಲು ಸಿಎಜಿ ಸಲಹೆ

Published : Mar 10, 2017, 02:27 PM ISTUpdated : Apr 11, 2018, 12:38 PM IST
ರೈಲ್ವೆ ಪ್ರಯಾಣ ದರ ಏರಿಸಲು ಸಿಎಜಿ ಸಲಹೆ

ಸಾರಾಂಶ

2014-15ರಲ್ಲಿ ಪ್ರಯಾಣಿಕ ಸೇವೆಯಿಂದ ರೈಲ್ವೆಗೆ 33,821 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

ನವದೆಹಲಿ(ಮಾ.10): ಪ್ರಯಾಣಿಕ ರೈಲು ಸೇವೆಯ ನಷ್ಟ ಭರಿಸುವ ನಿಟ್ಟಿನಿಂದ ಹಂತ ಹಂತವಾಗಿ ಪ್ರಯಾಣ ದರಗಳ ಪರಿಷ್ಕರಣೆ ಮತ್ತು ರಿಯಾಯಿತಿ ಪಾಸ್‌'ಗಳಿಗೆ ಕಡಿವಾಣ ಹಾಕುವಂತೆ ರೈಲ್ವೆಗೆ ಮಹಾಲೇಖಪಾಲರು (ಸಿಎಜಿ) ಶಿಫಾರಸು ಮಾಡಿದ್ದಾರೆ.

ಸಬ್ ಅರ್ಬನ್ ರೈಲು ಸೇವೆಗಳ ಕಾರ್ಯನಿರ್ವಹಣೆ ವೆಚ್ಚವನ್ನು ಸರಿದೂಗಿಸಲು ಹಂತ ಹಂತವಾಗಿ ಪ್ರಯಾಣಿಕರ ಶುಲ್ಕವನ್ನು ಏರಿಕೆ ಮಾಡಬೇಕು ಮತ್ತು ವಿವಿಧ ವರ್ಗಗಳ ಪ್ರಯಾಣಿಕರ ರಿಯಾಯಿತಿ ಪಾಸ್‌'ಗಳ ಹೊಣೆಗಾರಿಕೆಯನ್ನು ಕಡಿಮೆ ಮಾಡಬೇಕು ಎಂದು ಸಂಸತ್ತಿಗೆ ಮಹಾಲೇಖಪಾಲರು ವರದಿ ಸಲ್ಲಿಸಿದ್ದಾರೆ.

2014-15ರಲ್ಲಿ ಪ್ರಯಾಣಿಕ ಸೇವೆಯಿಂದ ರೈಲ್ವೆಗೆ 33,821 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಪ್ರಯಾಣಿಕ ಸಾರಿಗೆಯ ಕಾರ್ಯನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ರೈಲ್ವೆಯಿಂದ ಸಾಧ್ಯವಾಗುತ್ತಿಲ್ಲ. ಆದರೆ, ಸರಕು ಸಾಗಣೆಯಿಂದ 38,312 ಕೋಟಿ ರೂಪಾಯಿ ಲಾಭವಾಗಿದೆ. ಅದನ್ನು ಪ್ರಯಾಣಿಕ ಸೇವೆಯಿಂದ ಉಂಟಾದ ನಷ್ಟವನ್ನು ತುಂಬಿಕೊಳ್ಳಲು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಎಜಿ ವರದಿ ತಿಳಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೇಮಿಂಗ್ ಕ್ರಿಯೇಟರ್ ಫೆರಾರಿ ಕಾರು ಅಪಘಾತದಲ್ಲಿ ಸಾವು, ಮೊಬೈಲ್‌ನಲ್ಲಿ ಭೀಕರ ದೃಶ್ಯ ಸೆರೆ
Bengaluru: ಯಲಹಂಕದಲ್ಲಿ ನಿರ್ಮಾಣವಾಗಲಿದೆ ಭಾರತದ ಮೊಟ್ಟಮೊದಲ, ಚೀನಾ ಸ್ಟೈಲ್‌ನ ಎತ್ತರಿಸಿದ ರೈಲ್ವೆ ಟರ್ಮಿನಲ್‌!