ಕೇವಲ 999 ರೂ.ಗೆ ವಿಮಾನ ಟಿಕೆಟ್; ವಿಸ್ತಾರಾ ಮಸ್ತ್ ಆಫರ್

Published : Mar 10, 2017, 01:36 PM ISTUpdated : Apr 11, 2018, 12:53 PM IST
ಕೇವಲ 999 ರೂ.ಗೆ ವಿಮಾನ ಟಿಕೆಟ್; ವಿಸ್ತಾರಾ ಮಸ್ತ್ ಆಫರ್

ಸಾರಾಂಶ

ಈ ಆಫರ್ ಪಡೆಯಲು ಮಾರ್ಚ್ 10ರಿಂದ ಮಾರ್ಚ್ 15 ಮಧ್ಯರಾತ್ರಿಯವರೆಗೆ ಬುಕಿಂಗ್ ತೆರೆದಿರುತ್ತದೆ.

ನವದೆಹಲಿ(ಮಾ. 10): ದೇಶದ ವೈಮಾನಿಕ ಕ್ಷೇತ್ರದಲ್ಲಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದರ ಪರಿಣಾಮ, ವಿಮಾನಯಾನ ಕಂಪನಿಗಳು ತಮ್ಮ ಪ್ರಯಾಣ ದರವನ್ನು ಇಳಿಸಲು ಪೈಪೋಟಿಗೆ ಇಳಿದಿವೆ. ಟಾಟಾ ಸನ್ಸ್ ಒಡೆತನದ ವಿಸ್ತಾರಾ ಸಂಸ್ಥೆಯು ಬಹಳ ಅಗ್ಗದ ದರದಲ್ಲಿ ವಿಮಾನ ಟಿಕೆಟ್ ನೀಡುತ್ತಿದೆ. ಗುವಾಹಟಿ-ಭುನವೇಶ್ವರ್ ಮಾರ್ಗದಲ್ಲಿ ಕೇವಲ 999 ರೂಪಾಯಿಗೆ ಪ್ರಯಾಣ ಮಾಡಬಹುದಾಗಿದೆ.

ಹೋಳಿ ಹಬ್ಬದ ಪ್ರಯುಕ್ತ ವಿಸ್ತಾರಾ ಸಂಸ್ಥೆಯು ಈ ಭರ್ಜರಿ ಆಫರ್ ನೀಡುತ್ತಿದೆ. ಬೆಂಗಳೂರಿನಿಂದ ಡೆಲ್ಲಿಗೆ ಹಾಗೂ ಬೆಂಗಳೂರಿನಿಂದ ಕೋಲ್ಕತಾಗೆ ಟಿಕೆಟ್ ದರ ಕೇವಲ 2,999 ರೂಪಾಯಿ ಇದೆ. ಈ ಆಫರ್'ಗಳು ಸೀಮಿತ ಅವಧಿಯವರೆಗೆ ಮಾತ್ರವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಈ ಆಫರ್ ಪಡೆಯಲು ಇವತ್ತಿನಿಂದ, ಅಂದರೆ ಮಾರ್ಚ್ 10ರಿಂದ ಮಾರ್ಚ್ 15 ಮಧ್ಯರಾತ್ರಿಯವರೆಗೆ ಬುಕಿಂಗ್ ತೆರೆದಿರುತ್ತದೆ. ಮಾರ್ಚ್ 30ರಿಂದ ಅಕ್ಟೋಬರ್ 1ರವರೆಗಿನ ಅವಧಿಯಲ್ಲಿನ ಪ್ರಯಾಣಕ್ಕಾಗಿ ಬುಕಿಂಗ್ ಮಾಡಬಹುದಾಗಿದೆ. ಅಂದರೆ, 21 ದಿನ ಮುಂಚಿತವಾಗಿ ನಾವು ಬುಕ್ ಮಾಡಬೇಕಾಗುತ್ತದೆ.

ಟಾಟಾ ಸನ್ಸ್ ಹಾಗೂ ಸಿಂಗಾಪುರ ಏರ್'ಲೈನ್ಸ್ ಸಂಸ್ಥೆಗಳ ಜಂಟಿ ಮಾಲಕತ್ವದಲ್ಲಿ 2 ವರ್ಷಗಳ ಹಿಂದಷ್ಟೇ ವಿಸ್ತಾರಾ ಏರ್'ಲೈನ್ಸ್ ಸಂಸ್ಥೆಯನ್ನು ಆರಂಭಿಸಲಾಗಿದೆ. ರಾಷ್ಟ್ರಾದ್ಯಂತ 19 ಸ್ಥಳಗಳಿಗೆ ವಿಸ್ತಾರಾ ನೆಟ್ವರ್ಕ್ ಬೆಳೆದಿದೆ.

ವಿಸ್ತಾರಾ, ಏರ್'ಏಷ್ಯಾ, ಏರ್ ಇಂಡಿಯಾ ಮೊದಲಾದ ಸಂಸ್ಥೆಗಳು ಮಧ್ಯಮವರ್ಗಕ್ಕೆ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವೈಮಾನಿಕ ಕ್ಷೇತ್ರ ಚೇತರಿಕೆ ಕಾಣುತ್ತಿದೆ. ವರ್ಷಕ್ಕೆ ಶೇ.25ರಷ್ಟು ಬೆಳವಣಿಗೆಯಾಗುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!
KPTCL ಕೆಲಸ, ಶನಿವಾರ ಬೆಂಗಳೂರಲ್ಲಿ ಕರೆಂಟ್‌ ಇರಲ್ಲ..!