ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

By Web DeskFirst Published Jul 30, 2019, 9:58 AM IST
Highlights

ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ?| ಸಿದ್ಧಾರ್ಥ್ ಬರೆದಿಟ್ಟಿರುವ ಪತ್ರ ಸುವರ್ಣ ನ್ಯೂಸ್ಗೆ ಲಭ್ಯ| ಕಾಫಿ ಡೇ ನಿರ್ದೇಶಕರು, ಸಿಬ್ಬಂದಿಗೆ ಸಿದ್ಧಾರ್ಥ್ ಬರೆದಿರುವ ಪತ್ರ| ಸಾಲದ ಹೊಡೆತಕ್ಕೆ ನಲುಗಿರುವ ಬಗ್ಗೆ ಪತ್ರದಲ್ಲಿ ಸಿದ್ಧಾರ್ಥ್ ಉಲ್ಲೇಖ
 

ಬೆಂಗಳೂರು[ಜು.30]: ಮಾಜಿ ವಿದೇಶಾಂಗ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅಳಿಯ ವಿ. ಜಿ. ಸಿದ್ಧಾರ್ಥ ಸೋಮವಾರ ಸಂಜೆ ದಿಢೀರ್ ನಾಪತ್ತೆಯಾಗಿದ್ದರು. ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವಾದರೂ ಸದ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸಿದ್ದಾರ್ಥ ನಾಪತ್ತೆಯಾಗುವುದಕ್ಕೂ ಮೊದಲು ಮೇಲ್ ಮಾಡಿರುವ ಪತ್ರದಲ್ಲಿ ಇಂತಹ ಸುಳಿವನ್ನು ನೀಡಿದ್ದಾರೆ. ಸಾಲದ ಸುಳಿವಿಗೆ ಸಿಕ್ಕಿಕೊಂಡ ಸಿದ್ದಾರ್ಥ ಒತ್ತಡಕ್ಕೊಳಗಾಗಿರುವುದು ಈ ಪತ್ರದಲ್ಲಿ ಸ್ಪಷ್ಟವಾಗಿದೆ

ಎಸ್‌.ಎಂ.ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ ನೇತ್ರಾವತಿ ನದಿ ಬಳಿ ನಾಪತ್ತೆ

ಸಿದ್ಧಾರ್ಥ್ ಇಮೇಲ್ ಮಾಡಿದ್ದಾರೆ ಎನ್ನಲಾದ ಪತ್ರ ಸುವರ್ಣ ನ್ಯೂಸ್ಗೆ ಲಭ್ಯವಾಗಿದ್ದು, ಇದರಲ್ಲಿ ಸಾಲದ ಹೊಡೆತಕ್ಕೆ ನಲುಗಿರುವ ಕುರಿತು  ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾಫಿ ಡೇ ನಿರ್ದೇಶಕರು ಹಾಗೂ ಸಿಬ್ಬಂದಿಗೆ ಸಿದ್ಧಾರ್ಥ ಈ ಪತ್ರ ಬರೆದಿದ್ದು

37 ವರ್ಷಗಳ ಕಂಪನಿ ಬೆಳೆಸಲು ಬದ್ಧತೆಯಿಂದ ಕೆಲಸ ಮಾಡಿದ್ದೇನೆ. 6 ತಿಂಗಳ ಹಿಂದಷ್ಟೇ ಅಧಿಕ ಪ್ರಮಾಣದ ಸಾಲ ಪಡೆದಿದ್ದೇನೆ. ಸ್ನೇಹಿತರೊಬ್ಬರ ಬಳಿ ದೊಡ್ಡಮಟ್ಟದ ಸಾಲ ಮಾಡಿದ್ದೇನೆ. ಇತರ ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ. ಲಾಭದಾಯಕ ಯಶಸ್ವಿ ಉದ್ಯಮಿಯಾಗಲು ನನ್ನಿಂದ ಸಾಧ್ಯವಾಗಲಿಲ್ಲ. ಹೆಚ್ಚಿನ ಒತ್ತಡವನ್ನು ನನ್ನಿಂದ ತೆಗೆದುಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಷೇರುಗಳನ್ನು ಹಿಂಪಡೆಯುವಂತೆ ನನ್ನ ಮೇಲೆ ಒತ್ತಡವಿದೆ. ಈಗ ಎಲ್ಲವನ್ನೂ ಕೈಚೆಲ್ಲಲು ನಿರ್ಧಾರ ಮಾಡಿದ್ದೇನೆ. ಹಿಂದಿನ ಆದಾಯ ತೆರಿಗೆ ಇಲಾಖೆ ಡಿಜಿ ತುಂಬಾ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಎಲ್ಲ ನಿರ್ಧಾರಗಳಿಗೆ ನಾನೇ ನೇರ ಕಾರಣ. ಯಾರಿಗೂ ಮೋಸ ಮಾಡುವ, ದಿಕ್ಕು ತಪ್ಪಿಸುವ ಉದ್ದೇಶ ನನ್ನದಾಗಿರಲಿಲ್ಲ. ಈ ಎಲ್ಲ ವಿಷಯಗಳನ್ನು ನನ್ನ ಕುಟುಂಬಸ್ಥರಿಂದಲೂ ಮುಚ್ಚಿಟ್ಟಿದ್ದೆ. ಒಂದಲ್ಲ ಒಂದು ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ, ಕ್ಷಮಿಸುತ್ತೀರಿ ಎಂದುಕೊಂಡಿದ್ದೇನೆ' ಎಂದು ಬರೆದಿದ್ದಾರೆ.

 


ಅತ್ಯಂತ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದ ಸಿದ್ಧಾರ್ಥ  ಸಾಲದ ಸುಳಿಗೆ ಸಿಕ್ಕಿ ನಲುಗುತ್ತಿದ್ದರೆಂಬುವುದು ಈ ಪತ್ರದಿಂದ ಸ್ಪಷ್ಟವಾಗಿದೆ. ಕಳೆದ ಮೂರು ದಿನಗಳಿಂದ ತೀವ್ರ ಒತ್ತಡಕ್ಕೊಳಗಾಗಿದ್ದರೆಂಬುವುದೂ ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ

click me!